ADVERTISEMENT

ಹೊಸಪೇಟೆ: ಸಂತಸ ತಂದ ಜಿಟಿಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 14:21 IST
Last Updated 24 ಜೂನ್ 2019, 14:21 IST
ಸೋಮವಾರ ಸಂಜೆ ದಟ್ಟ ಕಾರ್ಮೋಡ ಆವರಿಸಿಕೊಂಡು ಜಿಟಿಜಿಟಿ ಮಳೆಯಾದಾಗ ಹೊಸಪೇಟೆಯ ಮುನ್ಸಿಪಲ್‌ ಮೈದಾನದ ಬಳಿ ರಸ್ತೆ ಕಂಡಿದ್ದು ಹೀಗೆ
ಸೋಮವಾರ ಸಂಜೆ ದಟ್ಟ ಕಾರ್ಮೋಡ ಆವರಿಸಿಕೊಂಡು ಜಿಟಿಜಿಟಿ ಮಳೆಯಾದಾಗ ಹೊಸಪೇಟೆಯ ಮುನ್ಸಿಪಲ್‌ ಮೈದಾನದ ಬಳಿ ರಸ್ತೆ ಕಂಡಿದ್ದು ಹೀಗೆ   

ಹೊಸಪೇಟೆ: ಸೋಮವಾರ ಸಂಜೆ ನಗರ ಹಾಗೂ ಸುತ್ತಮುತ್ತ ಜಿಟಿಜಿಟಿ ಮಳೆಯಾಗಿದ್ದರಿಂದ ವಾತಾವರಣ ಸಂಪೂರ್ಣ ತಂಪಾಯಿತು.

ಸಂಜೆ ಆರು ಗಂಟೆ ಸುಮಾರಿಗೆ ಆರಂಭವಾದ ಮಳೆ ರಾತ್ರಿ ಎಂಟು ಗಂಟೆಯ ವರೆಗೆ ಮುಂದುವರೆದಿತ್ತು. ಅನೇಕರು ಮಳೆಯಲ್ಲಿಯೇ ನೆನೆದುಕೊಂಡು ಹೋಗುತ್ತಿರುವ ದೃಶ್ಯ ರಸ್ತೆಗಳಲ್ಲಿ ಕಂಡು ಬಂತು. ಚಿಣ್ಣರು ಮಳೆಯಲ್ಲಿ ಆಟವಾಡಿ ಸಂಭ್ರಮಿಸಿದರು.

ಅನೇಕ ದಿನಗಳಿಂದ ಜನ ಮಳೆಯ ನಿರೀಕ್ಷೆಯಲ್ಲಿದ್ದರು. ಹಲವು ದಿನಗಳಿಂದ ಕಾರ್ಮೋಡ ಕವಿಯುತ್ತಿತ್ತು. ಇನ್ನೇನು ಮಳೆಯಾಗಿಯೇ ಬಿಟ್ಟಿತ್ತು ಅನ್ನುವಷ್ಟರಲ್ಲಿ ಮೋಡಗಳು ಚದುರಿ ಹೋಗುತ್ತಿದ್ದವು. ಇದರಿಂದ ಜನ ನಿರಾಶರಾಗುತ್ತಿದ್ದರು. ಆದರೆ, ಸೋಮವಾರ ವರ್ಷಧಾರೆಯಾಗಿ ನಿರಾಶೆಯ ಕಾರ್ಮೋಡ ತಾತ್ಕಾಲಿಕವಾಗಿ ದೂರವಾಯಿತು.

ADVERTISEMENT

ತಾಲ್ಲೂಕಿನ ಹೊಸೂರು, ಮುದ್ಲಾಪುರ, ಕಾರಿಗನೂರು, ಸಂಕ್ಲಾಪುರ, ವ್ಯಾಸನಕೆರೆ ಸೇರಿದಂತೆ ಹಲವೆಡೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.