ಬಳ್ಳಾರಿ: ಸಹೋದರ–ಸಹೋದರಿಯರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನದ ಅಂಗವಾಗಿ ವಿವಿಧ ಬಗೆಯ ರಾಖಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ನಗರದ ಬೆಂಗಳೂರು ರಸ್ತೆ, ಕಾಳಮ್ಮ ಬೀದಿ, ಗಾಂಧಿನಗರ ಮಾರುಕಟ್ಟೆ, ಕೌಲ್ ಬಜಾರ್ ಬಜಾರ್ ಮಾರುಕಟ್ಟೆಗಳಲ್ಲಿ ತರಹೇವಾರಿ ರಾಖಿಗಳು ಮಾರಾಟಕ್ಕಿದ್ದು, ಜನರು ರಾಖಿ ಖರೀದಿಸುವ ದೃಶ್ಯ ಕಂಡಿತು.
ರಾಖಿಗಳ ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ. ಕನಿಷ್ಠ ₹5ರಿಂದ ಗರಿಷ್ಠ ₹500ವರೆಗೆ ರಾಖಿಗಳು ಲಭ್ಯ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.