ರಂಜಾನ್ ಈದ್ ಸಮೀಪಿಸುತ್ತಿದೆ. ಬಳ್ಳಾರಿ ನಗರ ಹಬ್ಬದ ಆಚರಣೆಗೆ ಸಜ್ಜಾಗುತ್ತಿದೆ. ರಂಜಾನ್ ಮಾಸದ ಪ್ರಯುಕ್ತ ಮಾರುಕಟ್ಟೆಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ. ಕಣ್ಣು ಹಾಯಿಸಿದಲ್ಲೆಲ್ಲಾ ಖರೀದಿಗೆ ಬಂದ ಜನ, ವಿವಿಧ ಹೊಟೇಲ್‌ಗಳಲ್ಲಿ ಬಗೆಬಗೆಯ ಖಾದ್ಯ. ಹಣ್ಣು, ಖರ್ಜೂರ, ಸಮೋಸ ಅಂಗಡಿಗಳ ಸಾಲು. ಮತ್ತೊಂದೆಡೆ, ಹೊಸ ಬಟ್ಟೆ, ಅಲಂಕಾರಿಕ ವಸ್ತು ಖರೀದಿಗೆ ಜನ ದಂಡಿ ದಂಡಿಯಾಗಿ ಬರುತ್ತಿರುವ ದೃಶ್ಯಗಳು ಸಾಮಾನ್ಯವೋ ಎಂಬಂತೆ ಕಂಡು ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.