ADVERTISEMENT

ರೆಡ್ಡಿ ಸಮುದಾಯ ಒಳಪಂಗಡ ಸಂಘಟಿತವಾಗಲಿ: ವೇಮಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 4:53 IST
Last Updated 29 ಡಿಸೆಂಬರ್ 2025, 4:53 IST
ಕಂಪ್ಲಿಯಲ್ಲಿ ಭಾನುವಾರ ನಡೆದ ಹಿಂದೂ ರೆಡ್ಡಿ ಜಾಗೃತಿ ಸಭೆಗೆ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ಪೀಠಾಧಿಪತಿ ವೇಮಾನಂದ ಸ್ವಾಮೀಜಿ ಚಾಲನೆ ನೀಡಿದರು
ಕಂಪ್ಲಿಯಲ್ಲಿ ಭಾನುವಾರ ನಡೆದ ಹಿಂದೂ ರೆಡ್ಡಿ ಜಾಗೃತಿ ಸಭೆಗೆ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ಪೀಠಾಧಿಪತಿ ವೇಮಾನಂದ ಸ್ವಾಮೀಜಿ ಚಾಲನೆ ನೀಡಿದರು   

ಕಂಪ್ಲಿ: ರೆಡ್ಡಿ ಸಮುದಾಯದ ಒಳ ಪಂಗಡಗಳೆಲ್ಲ ಸಂಘಟಿತರಾಗಿ ರೆಡ್ಡಿ ಪರಂಪರೆಯನ್ನು ಬಲಗೊಳಿಸುವಂತೆ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ಪೀಠಾಧಿಪತಿ ವೇಮಾನಂದ ಸ್ವಾಮೀಜಿ ತಿಳಿಸಿದರು.

ಇಲ್ಲಿನ ರಾಘವೇಂದ್ರಸ್ವಾಮಿ ಕಲ್ಯಾಣಮಂಟಪದಲ್ಲಿ ಹೇಮ ವೇಮ ರೆಡ್ಡಿ ತಾಲ್ಲೂಕು, ಜಿಲ್ಲಾ ಸಮಾಜಗಳ ರಾಷ್ಟ್ರಕೂಟ ರೆಡ್ಡಿ ಪರಿವಾರ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ರೆಡ್ಡಿ ಜಾಗೃತಿ ಸಭೆಗೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಒದಗಿಸಲು ಶಿಕ್ಷಣ ಸಂಸ್ಥೆ ಆರಂಭಿಸಬೇಕು. ಅಸಹಾಯಕರಿಗೆ ನೆರವು ನೀಡಬೇಕು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಸಲಹೆ ನೀಡಿದರು.

ADVERTISEMENT

ಹೇಮ ವೇಮ ರೆಡ್ಡಿ ಸಮಾಜದ ಜಿಲ್ಲಾ ಅಧ್ಯಕ್ಷ ನಾರಾ ಪ್ರತಾಪರೆಡ್ಡಿ ಮಾತನಾಡಿ, ರೆಡ್ಡಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ರೆಡ್ಡಿ ಸಮುದಾಯಕ್ಕೆ ಶಿಕ್ಷಣ, ಉದ್ಯೋಗಕ್ಕಾಗಿ ವಿಶೇಷ ಮೀಸಲು ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕಂಪ್ಲಿಯಲ್ಲಿ ರೆಡ್ಡಿ ಸಂಘಕ್ಕಾಗಿ ನಿವೇಶನ ನೀಡುವುದಾಗಿ ಗಂಗಾವತಿಯ ಗೌಸ್ಲೆಪ್ಪ ಗದ್ದಿ ಭರವಸೆ ನೀಡಿದರು.

ರೆಡ್ಡಿ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ, ರಾಜ್ಯ ನಿರ್ದೇಶಕ ಐನಾಥರೆಡ್ಡಿ, ತಾಲ್ಲೂಕು ಅಧ್ಯಕ್ಷ ಬಸಲಿಂಗಪ್ಪ, ಪದಾಧಿಕಾರಿಗಳಾದ ವೆಂಕಟರೆಡ್ಡಿ, ಬಿ. ಸದಾಶಿವಪ್ಪ, ಹೊನ್ನಳ್ಳಿ ಗಂಗಾಧರ, ಇ. ಜಡೇಶರೆಡ್ಡಿ, ಅಚ್ಯುತರೆಡ್ಡಿ, ತಿಮ್ಮಾರೆಡ್ಡಿ, ಮರಿಸ್ವಾಮಿರೆಡ್ಡಿ, ಕುಮಾರಸ್ವಾಮಿರೆಡ್ಡಿ ಕುರೆಕುಪ್ಪ, ಸುದರ್ಶನರೆಡ್ಡಿ, ಜಿಲ್ಲೆಯ ರೆಡ್ಡಿ ಸಮುದಾಯದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.