ADVERTISEMENT

ಕೂಡ್ಲಿಗಿ: ರೇಣುಕಾಚಾರ್ಯರ ವೃತ್ತ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:50 IST
Last Updated 15 ಜೂನ್ 2025, 15:50 IST
ಕೂಡ್ಲಿಗಿ ಪಟ್ಟಣದಿಂದ ಹೊಸಪೇಟೆ ಕಡೆ ಹೋಗುವ ರಸ್ತೆಯಲ್ಲಿನ ರಾಷ್ಟ್ರೀಯ ಹೆದ್ದಾರಿ-50ರ ಬಳಿ ಭಾನುವಾರ ಆದಿ ಜಗದ್ಗುರು ರೇಣುಕಾಚಾರ್ಯರ ವೃತ್ತವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕವಲ್ಲಿ ಶಿವಪ್ಪ ನಾಯಕ ಉದ್ಘಾಟಿಸಿದರು
ಕೂಡ್ಲಿಗಿ ಪಟ್ಟಣದಿಂದ ಹೊಸಪೇಟೆ ಕಡೆ ಹೋಗುವ ರಸ್ತೆಯಲ್ಲಿನ ರಾಷ್ಟ್ರೀಯ ಹೆದ್ದಾರಿ-50ರ ಬಳಿ ಭಾನುವಾರ ಆದಿ ಜಗದ್ಗುರು ರೇಣುಕಾಚಾರ್ಯರ ವೃತ್ತವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕವಲ್ಲಿ ಶಿವಪ್ಪ ನಾಯಕ ಉದ್ಘಾಟಿಸಿದರು   

ಕೂಡ್ಲಿಗಿ: ‘ಪಟ್ಟಣದಲ್ಲಿ ಒಂದು ಕಡೆ ವೃತ್ತ ನಿರ್ಮಾಣ ಮಾಡಬೇಕು ಎನ್ನುವ ಜಂಗಮ ಸಮಾಜದ ಬಹು ದಿನಗಳ ಬೇಡಿಕೆ ಇಂದು ಈಡೇರಿದೆ’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕವಲ್ಲಿ ಶಿವಪ್ಪ ನಾಯಕ ಹೇಳಿದರು.

ಪಟ್ಟಣದಿಂದ ಹೊಸಪೇಟೆ ಕಡೆ ಹೋಗುವ ರಸ್ತೆಯಲ್ಲಿನ ರಾಷ್ಟ್ರೀಯ ಹೆದ್ದಾರಿ-50ರ ಬಳಿ ಆದಿ ಜಗದ್ಗುರು ರೇಣುಕಾಚಾರ್ಯರ ವೃತ್ತ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕು ಜಂಗಮ ಸಮಾಜದ ಅಧ್ಯಕ್ಷ ಕೂಡ್ಲಿಗಿ ಹಿರೇಮಠದ ಗಂಗಾಧರ ಸ್ವಾಮಿ ಮಾತನಾಡಿದರು.

ADVERTISEMENT

ಕೂಡ್ಲಿಗಿ ಹಿರೇಮಠದ ಚಿದಾನಂದಸ್ವಾಮಿ ಪೌರೋಹಿತ್ಯದಲ್ಲಿ ಪೂಜೆ ನೆರವೇರಿಸಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯರಾದ ತಳಾಸ್ ವೆಂಕಟೇಶ್, ಕೆ. ಈಶಪ್ಪ, ಕೆ.ಎಚ್.ಎಂ. ಸಚಿನ್ ಕುಮಾರ್, ಬೇಡ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಎಸ್.ಎಂ. ಕಾಶಿನಾಥಯ್ಯ, ಎ.ಎಂ. ಬಸವರಾಜ, ವೀರಶೈವ ಮುಖಂಡರಾದ ಟಿ.ಜಿ. ಮಲ್ಲಿಕಾರ್ಜುನಗೌಡ, ಕೋಗಳಿ ಮಂಜುನಾಥ, ತುಪ್ಪಳ್ಳಿ ಮೂಗಪ್ಪ, ಕೆ.ಎಚ್.ಎಂ. ತಿಪ್ಪೇಸ್ವಾಮಿ, ಎಳನೀರು ಮಂಜಣ್ಣ, ಮಲ್ಲಿಕಾರ್ಜುನ ಮಠದ, ಕೆ.ಎಚ್.ಎಂ. ವೀರಭದ್ರಯ್ಯ, ಎ.ಎಂ. ವಾಗೀಶಮೂರ್ತಿ, ರೆಹಮಾನ್ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಜಂಗಮ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.