ಹರಪನಹಳ್ಳಿ: ತಾಲ್ಲೂಕಿನ ಹಲುವಾಗಲು-ಗರ್ಭಗುಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬುಧವಾರ ಸಂಪೂರ್ಣ ಜಲಾವೃತಗೊಂಡು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಹಲುವಾಗಲಿನಿಂದ ಗರ್ಭಗುಡಿಗೆ ಹೋಗುವ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ವಾಹನಗಳು ಕಣವಿ ಮಾರ್ಗದ ಮೂಲಕ ಸಂಚಾರ ಮಾಡುತ್ತಿವೆ. ಗರ್ಭಗುಡಿ ಗ್ರಾಮದ ಗಂಗಮ್ಮ ದೇವಿ ಗುಡಿಯವರೆಗೂ ನೀರು ಬಂದಿದೆ. ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ಇಟ್ಟಿಗುಡಿ ಶಾಂತಮ್ಮ, ದೇವರ ತಿಮ್ಲಾಪುರದಲ್ಲಿ ಯಂಕಪ್ಪ, ತಾವರಗುಂದಿಯಲ್ಲಿ ರೇಣುಕಮ್ಮ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.