ಸಂಡೂರು: ಸಂಡೂರಿನಲ್ಲಿ ಛಾಯಾಗ್ರಾಹಕರ ಭವನನಿರ್ಮಾಣಕ್ಕೆ ₹50 ಲಕ್ಷ ಅನುದಾನ ನೀಡಲಾಗುವುದು ಎಂದು ಸಂಸದ ಇ.ತುಕಾರಾಂ ತಿಳಿಸಿದರು.
ಪಟ್ಟದ ಆದರ್ಶ ಕಲ್ಯಾಣ ಮಂಟಪದಲ್ಲಿ 'ಸಂಡೂರು ಫೋಟೋಗ್ರಾಪರ್ಸ್ ಮತ್ತು ವಿಡಿಯೋಗ್ರಾಫರ್' ಸಂಘದ ತಾಲ್ಲೂಕು ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
₹9 ಕೋಟಿ ವೆಚ್ಚದಲ್ಲಿ ನಾರಿಹಳ್ಳ ಜಲಾಶಯವನ್ನು ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಛಾಯಾಗ್ರಾಹಕರಿಗೂ ಅನುಕೂಲವಾಗಲಿದೆ ಎಂದರು. ಕರ್ನಾಟಕ ಫೋಟೋಗ್ರಾರ್ಸ್ ಅಸೋಸಿಯೇಷನ್ ರಾಜ್ಯ ಸಮಿತಿ ಅಧ್ಯಕ್ಷ ಎಚ್.ಎಸ್.ನಾಗೇಶ್ ಮಾತನಾಡಿ, ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕರ ಗುಂಪಿಗೆ ಸೇರಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ದೇವದುರ್ಗದ ರಮೇಶ್ ಬೆಲ್ಲದ್ ಹಾಗೂ ಅಥಣಿಯ ಬಸವರಾಜ್ ಉಮ್ರಾಣಿ ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳಿಗೆ ತಮ್ಮ ಉಪನ್ಯಾಸ ನೀಡಿ ಪ್ರೇರೇಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ, ಎಸ್.ಎಂ. ವಿನಯ್‌ಕುಮಾರ್, ಸಂಡೂರಿನ ವಿರಕ್ತಮಠದ ಪ್ರಭುಸ್ವಾಮೀಜಿ, ಸಂಘದ ಉಪಾಧ್ಯಕ್ಷ ಎ.ಕಾಶಪ್ಪ ಮಾತನಾಡಿದರು.
ಹಿರಿಯಛಾಯಾಗ್ರಾಹಕರನ್ನು, ಕನ್ನಡ ಹಾಗೂ ಇಂಗ್ಲಿಷ್ ಮಾದ್ಯಮದಲ್ಲಿ ತಾಲ್ಲೂಕಿಗೆ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕರ್ನಾಟಕ ಫೋಟೊಗ್ರಾರ್ಸ್ ಸಂಘದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿ ಎ.ಎಂ, ಸಂಘಟನಾ ಕಾರ್ಯದರ್ಶಿ ವೀರೇಶ್.ಕೆ, ನಿಕಟಪೂರ್ವ ಅಧ್ಯಕ್ಷ ಪರಮೇಶ್ವರ್, ಜಿಲ್ಲಾ ಸಂಘದ ಅಧ್ಯಕ್ಷ ನಾಡಗೌಡ
ಚಂದ್ರಮೋಹನ್, ಬಿಇಒ ಐ.ಆರ್.ಅಕ್ಕಿ, ಸಂಡೂರು ಸಂಘದ ಗೌರವಾಧ್ಯಕ್ಷ ಟಿ.ಜಿಲಾನ್, ಜೆ.ಕೊಟ್ರೇಶ್, ಕೆ.ವಿ.ಸತ್ಯನಾರಾಯಣ, ಎಸ್.ಚಿದಾನಂದ, ಪರಶುರಾಮ ಮದ್ದಾನಿ, ಕೆ.ಸಾದಿಕ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.