ಹರಪನಹಳ್ಳಿ: ‘ದೇಶದಲ್ಲಿ ಒಂದು ಬಾವುಟ, ಒಂದು ಸಂವಿಧಾನ ಇರಬೇಕು ಎಂದು ಜನ ಸಂಘದ ಸಂಸ್ಥಾಪಕ ಶಾಮ ಪ್ರಸಾದ್ ಮುಖರ್ಜಿ ಅವರು ಪ್ರತಿಪಾದಿಸಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಂತಹ ಮಹನೀಯರನ್ನು ನಾವೆಲ್ಲ ಸ್ಮರಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.
ಪಟ್ಟಣದ ತೆಲುಗರ ಓಣಿ ಬಿಜೆಪಿ ಕಚೇರಿಯಲ್ಲಿ ಭಾನುವಾರ ತಾಲ್ಲೂಕು ಮಂಡಲ ಆಯೋಜಿಸಿದ್ದ ಶಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
‘ಹೊರಗಿನಿಂದ ಬಂದು ಹರಪನಹಳ್ಳಿ ಕ್ಷೇತ್ರದ ಚುನಾವಣೆ ಸೋತವರು ತಮ್ಮ ಪೆಟ್ಟಿಗೆ ಮುಚ್ಚಿಕೊಂಡು ಹೋಗುತ್ತಾರೆ ಎಂದು ಇಲ್ಲಿಯ ಮುಖಂಡರು ತಿಳಿಸಿದರು. ನಿಮ್ಮಲ್ಲಿಯೇ ಉತ್ತಮ ನಾಯಕರನ್ನು ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಂಡು, ಅವರಿವರ ಬಳಿ ಹೋಗುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಕೆ. ಲಕ್ಷ್ಮಣ್, ಮುಖಂಡರಾದ ಜಿ.ನಂಜನಗೌಡ್ರು, ಆರುಂಡಿನಾಗರಾಜ್, ಬಾಗಳಿ ಕೊಟ್ರೇಶಪ್ಪ, ಕಣಿವಿಹಳ್ಳಿ ಮಂಜುನಾಥ, ಓಂಕಾರ ಗೌಡ, ಎಂ.ಪಿ.ನಾಯ್ಕ, ಮಂಜನಾಯ್ಕ, ಮೈದೂರು ಮಲ್ಲಿಕಾರ್ಜುನ್, ಕೆ.ಲಿಂಗಾನಂದ, ರವಿ ಬಾರಿಕರ, ಕಡೆಮನಿ ಸಂಗಮೇಶ, ಸಪ್ನ, ಪದ್ಮಾವತಿ, ಬಾಗಳಿ ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.