
ಸಂಡೂರು: ತಾಲ್ಲೂಕಿನ ತೋರಣಗಲ್ಲು ಗ್ರಾಮದಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ನೂತನ ವಾಣಿಜ್ಯ ಮಳಿಗೆಗಳ ಕಟ್ಟಡವು ಕಳೆದ ಒಂದು ವರ್ಷದಿಂದ ಉದ್ಘಾಟನೆಯ ಭಾಗ್ಯ ಕಾಣದೆ ಸಂಪೂರ್ಣವಾಗಿ ಪಾಳು ಬಿದ್ದಿದೆ.
ಗ್ರಾಮದಲ್ಲಿನ ನೂತನ ವಾಣಿಜ್ಯ ಮಳಿಗೆಗಳ ಕಟ್ಟಡವನ್ನು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಾತ್ ಇಲಾಖೆಯವತಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ರೊರ್ಬನ್ ಯೋಜನೆಯ ಅನುದಾನದಲ್ಲಿ ರೂ.80ಲಕ್ಷ ವೆಚ್ಚದಲ್ಲಿ ಒಟ್ಟು 10ಮಳಿಗೆಗಳನ್ನು ನಿರ್ಮಿಸಲಾಗಿದೆ.
ನೂತನ ವಾಣಿಜ್ಯ ಮಳಿಗೆಗಳ ಕಟ್ಟಡದ ಕಾಮಗಾರಿಯನ್ನು 2023ರ ಜ.1ರಂದು ಆರಂಭಿಸಿ 2024ರ ನ.21ಕ್ಕೆ ಮುಗಿಸಲಾಗಿದ್ದು, ಅಧಿಕಾರಿಗಳಾ, ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ, ನಿರ್ಲಕ್ಷ್ಯದಿಂದ ಕಳೆದ ವರ್ಷದಿಂದ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯದೇ ನಿರುಪಯುಕ್ತವಾಗಿ ಅವನತಿಯತ್ತಸಾಗಿವೆ.
ನೂತನ ವಾಣಿಜ್ಯ ಮಳಿಗೆಗಳ ಕಟ್ಟಡವು ಪ್ರಸ್ತುತ ದಿನಗಳಲ್ಲಿ ಕುಡಕರ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟಿದ್ದು, ಮಳಿಗೆಗಳ ಆವರಣದಲ್ಲಿ ಮದ್ಯದ ಬಾಟಲಿ, ಪೌಚ್‍ಗಳು, ಗುಟ್ಕಾ ಚೀಟಿಗಳು ಸೇರಿದಂತೆ ಇತರೆ ತ್ಯಾಜ್ಯವು ಎಲ್ಲೆಂದರಲ್ಲೆ ರಾರಾಜಿಸುತ್ತಿದ್ದು, ಆಸ್ವಚ್ಚತೆಯಿಂದ ಕೂಡಿದೆ.
ವಾಣಿಜ್ಯ ಮಳಿಗೆಗಳ ಮೊದಲ ಮಹಡಿಯಲ್ಲಿನ ಕೆಲ ಕೊಠಡಿಗಳ ಕಭ್ಬಿಣದ ಬಾಗಿಲು ತೆರದಿದ್ದರಿಂದ ಮಳಿಗೆಗಳ ಒಳ ಆವರಣವು ಧೂಳುನಿಂದ ಆವರಿಸಿದ್ದು, ವ್ಯರ್ಥವಾದ ತ್ಯಾಜ್ಯವು ಸಂಗ್ರಹಗೊಂಡಿದೆ. ಕೊಠಡಿಗಳಿಗೆ ವಿದ್ಯುತ್ ಸಂಕರ್ಪವಿಲ್ಲದಿರುವುದರಿಂದ ವಿದ್ಯುತ್ ಸಂಪರ್ಕದ ಬೋರ್ಡ್, ಇತರೆ ವಿದ್ಯುತ್ ಪರಿಕರಗಳನ್ನು ಕೆಲ ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಳಿಗೆಗಳನ್ನು ಗ್ರಾಮದ ಜನವಸತಿ ಪ್ರದೇಶದಲ್ಲಿ ನಿರ್ಮಾಣಮಾಡಿದ್ದರಿಂದ ಮಳಿಗೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಹರಾಜು ಪ್ರಕ್ರಿಯೆ ನಡೆಸಿ ಗ್ರಾಮದ ಬಡ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮದ ಜನರ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.