ADVERTISEMENT

ಕುರುಗೋಡು: ಎಳ್ಳು–ಬೆಲ್ಲ ಹಂಚಿ ಸಂಭ್ರಮಿಸಿದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 4:34 IST
Last Updated 16 ಜನವರಿ 2026, 4:34 IST
ಕುರುಗೋಡಿನಲ್ಲಿ ಚಿಣ್ಣರು ಪರಸ್ಪರ ಎಳ್ಳು–ಬೆಲ್ಲ ನೀಡಿ ಸಂಕ್ರಾಂತಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು
ಕುರುಗೋಡಿನಲ್ಲಿ ಚಿಣ್ಣರು ಪರಸ್ಪರ ಎಳ್ಳು–ಬೆಲ್ಲ ನೀಡಿ ಸಂಕ್ರಾಂತಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು   

ಕುರುಗೋಡು: ಸಂಕ್ರಾಂತಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಗುರುವಾರ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ಸಾಯಿಬಾಬಾ ದೇವಸ್ಥಾನ, ಸುಂಕ್ಲಮ್ಮದೇವಿ ದೇವಸ್ಥಾನ, ಪಂಚಮುಖಿ ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ತಾಲ್ಲೂಕಿನ ಪ್ರಮುಖ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪುನೀತರಾದರು.

ಹಬ್ಬದ ಅಂಗವಾಗಿ ಮನೆಗಳಿಗೆ ಸಂಕ್ರಮಣ ಭಿಕ್ಷೆಗೆ ಬರುವ ಜಂಗಮರಿಗೆ ರೈತರು ದವಸ ಧಾನ್ಯ ಮತ್ತು ತರಕಾರಿ ದಾನ ಮಾಡಿ ಭಕ್ತಿ ಮೆರೆದರು. ಸಿಹಿಯೂಟ ತಯಾರಿಸಿ ಕುಟುಂಬ ಸದಸ್ಯರೆಲ್ಲ ಒಂದೆಡೆ ಸೇರಿ ಸವಿದರು. ಸಂಜೆ ಕುಟುಂಬದವರಿಗೆ, ಪರಿಚಯದವರಿಗೆ ಎಳ್ಳು–ಬೆಲ್ಲ ಬೀರಿ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT
ಸಂಕ್ರಾಂತಿ ಅಂಗವಾಗಿ ಕುರುಗೋಡಿನಲ್ಲಿ ಮನೆಗೆ ಭೇಟಿ ನೀಡಿದ ಜಂಗಮರಿಗೆ ಹೊಸದಾಗಿ ಬೆಳೆದ ಧಾನ್ಯಗಳನ್ನು ದಾನಮಾಡಿ ಭಕ್ತಿ ಮೆರೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.