ಸಂಡೂರು: ‘ಸಮಾಜದಲ್ಲಿನ ಎಲ್ಲ ಜನರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ, ಕ್ರಾಂತಿಯು ಅವಶ್ಯಕ. ಸಮಾಜವಾದಿಗಳು ಮಾತ್ರ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತಾರೆ. ಸಮ ಸಮಾಜದ ನಿರ್ಮಾಣಕ್ಕಾಗಿ ವೈಜ್ಞಾನಿಕ ಮನಸ್ಥಿತಿ ಅಗತ್ಯ’ ಎಂದು ನಟ ಚೇತನ್ ಅಹಿಂಸಾ ಹೇಳಿದರು.
ತಾಲ್ಲೂಕಿನ ತಾಳೂರು ಗ್ರಾಮದಲ್ಲಿ ಬೆಂಕ್ಯಮ್ಮ ದೇವಿ ಸೇವಾ ಟ್ರಸ್ಟ್, ವಿವಿಧ ದಲಿತ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಆಚರಣೆಯಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯಿಂದ ಅಸಮಾನತೆ ಉಂಟಾಗಿದೆ. ಅಸಮಾನತೆಯ ವ್ಯವಸ್ಥೆಯನ್ನು ನಾವುಗಳು ತಿದ್ದಬೇಕು. ಅಸಮಾನತೆ, ಅನ್ಯಾಯವನ್ನು ನಿರಂತರವಾಗಿ ಪ್ರಶ್ನೆ ಮಾಡಬೇಕು. ಆಳುವ ಶಕ್ತಿಗಳು ಮನಸ್ಸು ಮಾಡಿದರೆ ಮಾತ್ರ ನಾವು ಅಭಿವೃದ್ಧಿಯಾಗಲು ಸಾಧ್ಯ. ಜನರು ರಾಜಕೀಯ ಗಟ್ಟಿತನವನ್ನು ಬೆಳಸಿಕೊಳ್ಳಬೇಕು’ ಎಂದು ಹೇಳಿದರು.
ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ನೂತನ ಗ್ರಾಮ ಘಟಕದ ನಾಮಫಲಕವನ್ನು ಗಣ್ಯರು ಉದ್ಘಾಟಿಸಿದರು.
ಗ್ರಾಮ ಪಂಚಾತಿಯಿ ಅಧ್ಯಕ್ಷೆ ಷಣ್ಮುಕಮ್ಮ, ಉಪಾಧ್ಯಕ್ಷೆ ಎಚ್.ಕನಪ್ಪ, ಮುಖಂಡರಾದ ಯಂಕಮ್ಮ, ಸುಗ್ಗೇನಹಳ್ಳಿ ರಮೇಶ್, ನಿಂಗಪ್ಪ, ಶಂಕರ್, ಈರಣ್ಣ, ಹನುಮಂತಪ್ಪ, ಶಂಕರ್, ಕಸ್ತೂರಿ ಮಂಜುನಾಥ್, ಸಾರ್ವಜನಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.