ADVERTISEMENT

ಎಲ್‌ಐಸಿ: ಸ್ವಯಂದೃಢೀಕರಣ ಕಡ್ಡಾಯ

ಕೊರೊನಾ ಸೋಂಕು ಹಬ್ಬುವಿಕೆ ತಡೆಗೆ ಕ್ರಮ: ಶನಿವಾರದಿಂದಲೇ ಜಾರಿ

ಕೆ.ನರಸಿಂಹ ಮೂರ್ತಿ
Published 24 ಮಾರ್ಚ್ 2020, 10:56 IST
Last Updated 24 ಮಾರ್ಚ್ 2020, 10:56 IST

ಬಳ್ಳಾರಿ: ನಿಮ್ಮ ಜೀವ ವಿಮಾ ಪಾಲಿಸಿಯ ಕಂತು ‍ಪಾವತಿಸುವ ಅವಧಿ ಮುಗಿದು ಪಾಲಿಸಿಯನ್ನು ನವೀಕರಿಸಬೇಕಾಗಿದೆಯೇ? ಹಾಗಿದ್ದರೆ ನೀವು ಮನವಿ ಪತ್ರದ ಜೊತೆಗೆ ‘ನನಗೆ ಕೋವಿಡ್‌ 19 ಸೋಂಕು ಇಲ್ಲ’ ಎಂಬ ಸ್ವಯಂ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ನೀಡಲೇಬೇಕು.

ಕೊರೊನಾ ಹಬ್ಬುವುದನ್ನು ತಡೆಗಟ್ಟುವ ಸಲುವಾಗಿಯೇ ಭಾರತೀಯ ಜೀವ ವಿಮಾ ನಿಗಮವು ಶನಿವಾರದಿಂದಲೇ ದೇಶ
ದಾದ್ಯಂತ ಈ ನಿಯಮವನ್ನು ಜಾರಿಗೆ ತಂದಿದೆ. ಪಾಲಿಸಿ ನವೀಕರಿಸುವವರಿಗೆ ಮಾತ್ರ ಈ ನಿಯಮವನ್ನು ಜಾರಿಗೆ ತರಲಾಗಿದೆ.

ಸೋಂಕಿತರು ಅಥವಾ ಶಂಕಿತ ಸೋಂಕಿತರು ನಿಜವಿಷಯವನ್ನು ಬಚ್ಟಿಟ್ಟು ಜನರ ನಡುವೆ ಸಂಚರಿಸಬಾರದು ಎಂಬ ಉದ್ದೇಶದಿಂದ ಇದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಉಳಿದ ಪಾಲಿಸಿದಾರರು ಈ ದೃಢೀಕರಣ ಪತ್ರ ನೀಡುವ ಅಗತ್ಯವಿಲ್ಲ.

ADVERTISEMENT

ಪಾಲಿಸಿದಾರರಿಗೆ ನಿಗಮದ ಸಿಬ್ಬಂದಿಯೇ ದೃಢೀಕರಣ ಪತ್ರದ ಪ್ರಶ್ನಾವಳಿ ಮಾದರಿಯನ್ನು ನೀಡುತ್ತಿದ್ದು, ಉತ್ತರವನ್ನು ಬರೆದು ಪಾಲಿಸಿದಾರರು ಮತ್ತೆ ಸಲ್ಲಿಸಬೇಕು.

ಪ್ರಶ್ನಾವಳಿ:ನೀವು ಭಾರತೀಯರೇ? ನೀವು ಇತ್ತೀಚೆಗೆ ವಿದೇಶಕ್ಕೆ ಹೋಗಿದ್ದೀರಾ? ಯಾವ ಉದ್ದೇಶಕ್ಕೆ ಹೋಗಿ
ದ್ದೀರಿ? ಯಾವಾಗ ಹೋಗಿದ್ದೀರಿ? ಮರಳಿ ಯಾವಾಗ ಬಂದಿರಿ? ನಿಮಗೆ ಸೋಂಕು ತಗುಲಿದೆಯೇ ಅಥವಾ ಶಂಕಿತ ಸೋಂಕಿನಿಂದ ನೀವು ಮನೆ
ಯಲ್ಲಿ ಪ್ರತ್ಯೇಕವಾಗಿದ್ದೀರಾ? ಸೋಂಕಿನ ಕಾರಣಕ್ಕೆ ನಿಮ್ಮನ್ನು ಆಸ್ಪ
ತ್ರೆಗೆ ದಾಖಲಿಸಲಾಗಿತ್ತೇ ಎಂಬ ಪ್ರಶ್ನೆ
ಗಳಿಗೆ ಉತ್ತರ ನೀಡಿದರೆ ಮಾತ್ರ ಪಾಲಿಸಿ ನವೀಕರಿಸುವ ಪ್ರಕ್ರಿಯೆ ಮುಂದು
ವರಿಯುತ್ತದೆ. ನಿಯಮಿತವಾಗಿ ಕಂತು ಪಾವತಿ ಮಾಡದೇ ಇರಲು ಸರಿಯಾದ ಕಾರಣವನ್ನು ಸಿಬ್ಬಂದಿಗೆ ವಿವರಿಸಬೇಕು.

ನಗರದಲ್ಲಿರುವ ನಿಗಮದ ಕಚೇರಿಗೆ ಪಾಲಿಸಿ ನವೀಕರಿಸಲೆಂದು ಬಂದ ನಾಲ್ವರಿಂದ ಸಿಬ್ಬಂದಿ ಈ ದೃಢೀಕರಣ ಪತ್ರವನ್ನು ಪಡೆದರು.

‘ದೇಶವನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ಎಷ್ಟು ಕಾಳಜಿ ವಹಿಸಿದರೂ ಸಾಲದು. ನಿಗಮವು ಕೂಡ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ’ ಎಂದು ನಿಗಮದ ನಗರ ಶಾಖೆಯ ವ್ಯವಸ್ಥಾಪಕ ಬಿ.ಶೇಕಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ದೇಶದಾದ್ಯಂತ ನಮ್ಮ ಕಚೇರಿಗಳಲ್ಲಿ ಸ್ವಯಂ ದೃಢೀಕರಣ ಪತ್ರ ಸಲ್ಲಿಸುವ ನಿಯಮ ಜಾರಿಗೆ ಬಂದಿರುವು
ದರಿಂದ, ವಿದೇಶ ಪ್ರಯಾಣ ಮಾಡಿ ಬಂದವರನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.