ಕಂಪ್ಲಿ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ 1.25 ಸೆಂ.ಮೀ., ಮಳೆಯಾಗಿದ್ದು, ಏಳು ಕಚ್ಚಾ ಮನೆಗಳು ಭಾಗಶಃ ಕುಸಿದಿವೆ ಎಂದು ತಹಶೀಲ್ದಾರ್ ಜೂಗಲ ಮಂಜುನಾಯಕ ತಿಳಿಸಿದ್ದಾರೆ.
ಎಮ್ಮಿಗನೂರು ಗ್ರಾಮದಲ್ಲಿ ಆರು ಕಚ್ಚಾ ಮನೆ ಮತ್ತು ಕಣಿವಿ ತಿಮ್ಮಲಾಪುರ ಗ್ರಾಮದಲ್ಲಿ ಒಂದು ಮನೆ ಭಾಗಶಃ ಮಳೆಗೆ ಬಿದ್ದಿವೆ.
ಎಮ್ಮಿಗನೂರಿನ 4ನೇ ವಾರ್ಡ್ ತಳವಾರ ಪೇಟೆಯ ಮಲ್ಲಿಕಾರ್ಜುನ ಗುಡಿ ಬಳಿ ಹುಲಿಗೆಮ್ಮ, ಕೆಂಚಮ್ಮ ಹಾಗೂ ಜೆ. ಅಮೃತಾ ಎನ್ನುವವರ ಮೂರು ಮನೆಗಳು ಒಂದೆಡೆ ಇದ್ದು, ಮುಂಭಾಗದ ಚಾವಣಿ ಕುಸಿದಿದೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ಎಮ್ಮಿಗನೂರು ಗ್ರಾಮಾಡಳಿತ ಅಧಿಕಾರಿ ಎಚ್.ವಿ. ಮಂಜುನಾಥ, ಕಣವಿ ತಿಮ್ಮಲಾಪುರ ಗ್ರಾಮಾಡಳಿತ ಅಧಿಕಾರಿ ಮಂಜುನಾಥ ಬೇಟಿ ನೀಡಿ ಪರಿಶೀಲಿಸಿದರು. ತಾಲ್ಲೂಕಿನ ಮಳೆಯಾಶ್ರಿತ ಬಹುತೇಕ ಭೂಮಿಗಳು ಮಳೆಗೆ ಹದವಾಗಿದ್ದು, ರೈತರು ಮಾಗಿ ಉಳುಮೆ ಸಿದ್ಧತೆ ಕೈಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.