ADVERTISEMENT

ಹೂವಿನಹಡಗಲಿ|ಈಟಿ ಶಂಭುನಾಥರ ಕೊಡುಗೆ ಅಪಾರ: ಶಾಸಕ ಕೃಷ್ಣನಾಯ್ಕ

​ಪ್ರಜಾವಾಣಿ ವಾರ್ತೆ
Published 21 ಮೇ 2025, 15:46 IST
Last Updated 21 ಮೇ 2025, 15:46 IST
ಹೂವಿನಹಡಗಲಿಯಲ್ಲಿ ಮಾಜಿ ಸಚಿವ ದಿ. ಈಟಿ ಶಂಭುನಾಥ ಜನ್ಮ ದಿನಾಚರಣೆ ಪ್ರಯುಕ್ತ ಶಾಸಕ ಕೃಷ್ಣನಾಯ್ಕ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಿದರು
ಹೂವಿನಹಡಗಲಿಯಲ್ಲಿ ಮಾಜಿ ಸಚಿವ ದಿ. ಈಟಿ ಶಂಭುನಾಥ ಜನ್ಮ ದಿನಾಚರಣೆ ಪ್ರಯುಕ್ತ ಶಾಸಕ ಕೃಷ್ಣನಾಯ್ಕ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಿದರು   

ಹೂವಿನಹಡಗಲಿ: ‘ಮಾಜಿ ಸಚಿವ ದಿವಂಗತ ಈಟಿ ಶಂಭುನಾಥ ಅವರು ನೀರಾವರಿ, ವಸತಿ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ರಾಜೀವ ನಗರದಲ್ಲಿ ಬುಧವಾರ ಗುರುಕುಲ ಕಿಡ್ಸ್ ಪಬ್ಲಿಕ್ ಶಾಲೆಯಲ್ಲಿ ಈಟಿ ಶಂಭುನಾಥ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಿ ಮಾತನಾಡಿದರು.

‘ಪಟ್ಟಣದ ಹೊನ್ನೂರು ರಸ್ತೆಯ ವೃತ್ತವನ್ನು ಈಟಿ ಶಂಭುನಾಥ ವೃತ್ತವನ್ನಾಗಿ ಅಭಿವೃದ್ಧಿಪಡಿಸಿ, ಅವರ ಕೊಡುಗೆಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವರೆಡ್ಡಿ, ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಎಚ್.ಪೂಜಪ್ಪ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಪುರಸಭೆ ಅಧ್ಯಕ್ಷೆ ಜಮಾಲ್ ಬೀ, ಮುಖಂಡರಾದ ಎಂ.ಪರಮೇಶ್ವರಪ್ಪ, ಹಣ್ಣಿ ಶಶಿಧರ, ಕೆ.ಪುತ್ರೇಶ, ಕರೆಂಗಿ ಸುಭಾಶ್ಚಂದ್ರ, ಸಿರಾಜ್ ಬಾವಿಹಳ್ಳಿ, ಶಂಕರ್ ನವಲಿ, ರಾಮಮೂರ್ತಿ, ಆರ್.ಟಿ.ನಾಗರಾಜ, ಜಂಬಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.