
ಸಂಡೂರು: 'ಒಂಟಿ ಮಹಿಳೆಯರ ಗಣತಿ ಮಾಡಿ, ಪುನರ್ವಸತಿಗೆ ಸೂಕ್ತ ಕ್ರಮವಹಿಸಬೇಕು. ಒಂಟಿ ಮಹಿಳೆಯರಿಗೆ ₹5000 ಮಾಸಿಕ ಸಹಾಯಧನ, ಮಹಿಳೆಯರ ಜನಸಂಖ್ಯೆಗನುಗುಣವಾಗಿ ಒಕ್ಕೂಟ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು. ಶೇ33ರಷ್ಟು ಮೊತ್ತವನ್ನು ಒಂಟಿ ಮಹಿಳೆಯರ ಪುನರ್ವಸತಿಗೆ ಮೀಸಲಿಡಬೇಕು' ಎಂದು ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘದ ಸಂಚಾಲಕಿ ಬಿ.ಮಾಳಮ್ಮ ಹೇಳಿದರು.
ತಾಲ್ಲೂಕಿನ ಕುರೆಕುಪ್ಪ ಪಟ್ಟಣದ ಸುಂಕ್ಲಮ್ಮ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಒಂಟಿ ಮಹಿಳೆಯರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
'ಮಹಿಳೆಯರಲ್ಲಿ ಒಂಟಿ ಮಹಿಳೆಯರ ಪಾಡು ಹೇಳತೀರದಾಗಿದೆ. ಅವರು ಕೇವಲ ಲಿಂಗ ತಾತಮ್ಯಕ್ಕೆ, ಜಾತಿ ತಾರತಮ್ಯಕ್ಕೆ ಒಳಗಾದವರು ಮಾತ್ರವಲ್ಲ. ಅವರು ತೀವ್ರ ರೀತಿಯ ಸಾಮಾಜಿಕ ಬಹಿಷ್ಕಾರಕ್ಕೊಳಗಾದವರಾಗಿದ್ದಾರೆ‘ ಎಂದರು.
ಒಂಟಿ ಮಹಿಳೆಯರ ಸಂಘಟನೆಯ ಸಂಡೂರು ತಾಲ್ಲೂಕು ಅಧ್ಯಕ್ಷೆ ಸುನಿತಾ, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಹ ಸಂಚಾಲಕ ವಿ.ದೇವಣ್ಣ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಪಂಪನಗೌಡ, ಕುರೆಕುಪ್ಪ ಗ್ರಾಮ ಘಟಕದ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷರಾದ ಸರಸ್ವತಿ, ಅಶ್ವಿನಿ, ಹೇಮಾವತಿ, ಜಯಮ್ಮ ಅಯ್ಯಮ್ಮ, ಪಾರ್ವತಿ, ಕಾರ್ಯದರ್ಶಿ ವಿಜಯಲಕ್ಷ್ಮಿ, ಮುಖಂಡರಾದ ಬಸಿರಮ್ಮ, ಲಕ್ಷ್ಮಿ, ಸುಜಾತಮ್ಮ, ಪದ್ಮಾವತಿ ಯು.ಹಂಪಮ್ಮ, ಸಾರ್ವಜನಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.