ADVERTISEMENT

ಸಿರುಗುಪ್ಪ | ದೀಪಾವಳಿ: ಗಗನಕ್ಕೆರಿದ ಮಲ್ಲಿಗೆ!

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 2:59 IST
Last Updated 21 ಅಕ್ಟೋಬರ್ 2025, 2:59 IST
ಸಿರುಗುಪ್ಪ ನಗರದ ಗಾಂಧಿ ವೃತ್ತದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಜನರು ವಿವಿಧ ಸಾಮಾಗ್ರಿಗಳನ್ನು ಖರೀದಿಸಿದರು
ಸಿರುಗುಪ್ಪ ನಗರದ ಗಾಂಧಿ ವೃತ್ತದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಜನರು ವಿವಿಧ ಸಾಮಾಗ್ರಿಗಳನ್ನು ಖರೀದಿಸಿದರು   

ಸಿರುಗುಪ್ಪ: ದೀಪಾವಳಿ ಆಚರಣೆಗಳು ಭರದಿಂದ ಸಾಗುತ್ತಿದೆ. ಜನರು ಹೂವುಗಳು, ಹಣ್ಣುಗಳು ಮತ್ತು ಹಬ್ಬದ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. ಈ ನಡುವೆ ಬೆಲೆಗಳು ಗಗನಕ್ಕೆ ಏರಿಕೆ ಆಗಿವೆ.

ದಿನದ ಮಾರುಕಟ್ಟೆಯಲ್ಲಿ, ಹಳೆ ಮಾರುಕಟ್ಟೆ, ಗಾಂಧಿ ವೃತ್ತ, ಆದೋವನಿ ರಸ್ತೆಯಲ್ಲಿ, ಸಿಂಧನೂರು ರಸ್ತೆಯಲ್ಲಿ, ತಾಲ್ಲೂಕಿನ ಮೈದಾನದಲ್ಲಿ ಬೆಳಿಗ್ಗೆಯಿಂದಲೇ ಖರೀದಿ ಭರಾಟೆ ನಡೆಯುತ್ತಿದೆ. ಇದರಿಂದಾಗಿ ಮಾರುಕಟ್ಟೆ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಹೂವಿನ ಮಾರಾಟವು ಭರದಿಂದ ಸಾಗುತ್ತಿದೆ. ಆದರೆ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹೂವಿನ ಪೂರೈಕೆಗೆ ಪರಿಣಾಮ ಬಿದ್ದಿದೆ.

ಹೂವಿನ ಬೆಲೆಗಳು ಏರಿಕೆಯಾಗಿದ್ದು, ಚೆಂಡು ಹೂವು ಪ್ರತಿ ಕೆಜಿಗೆ ₹80-₹100, 15 ಮಾರು ಕುಚ್ಚು ಸೇವಂತಿ ಹೂವು ₹2000, ಕನಕಾಂಬರ ₹300 ಮತ್ತು ಕೆ.ಜಿ.ಕುಚ್ಚು ಮಲ್ಲಿಗೆ ₹1200 ದರಕ್ಕೆ ಮಾರಾಟವಾಗುತ್ತಿದೆ.

ಪಟಾಕಿ ಖರೀದಿಯೂ ಜೋರಾಗಿದೆ. ತಾಲ್ಲೂಕು ಆಡಳಿತ ದಿಂದ ತಾಲ್ಲೂಕು ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದೆ. ಈ ಬಾರಿ, ಹಸಿರು ಪಟಾಕಿಗಳ ಮಾರಾಟ ಹೆಚ್ಚಾಗಿದೆ. ಪಟಾಕಿಯ ಬೆಲೆ ಕಳೆದ ವರ್ಷಕ್ಕಿಂತ ಶೇ 15ರಷ್ಟು ಏರಿಕೆಯಾಗಿದೆ. ಈ ಎಲ್ಲಾ ಚಟುವಟಿಕೆಗಳು ದೀಪಾವಳಿ ಹಬ್ಬದ ಉಲ್ಲಾಸವನ್ನು ಹೆಚ್ಚಿಸುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.