ಬಳ್ಳಾರಿ: ತಾಲ್ಲೂಕಿನ ಸಂಜೀವರಾಯನ ಕೋಟೆ ಗ್ರಾಮದಲ್ಲಿ ಭಾನುವಾರ ಸಂಜೆಹಾವು ಕಚ್ಚಿ ರೈತ ಮಹಿಳೆ ತಿಮ್ಮಕ್ಕ (41) ಮೃತಪಟ್ಟರು. ಅವರು ಗ್ರಾಮದ ಲಿಂಗರೆಡ್ಡಿ ಎಂಬುವವರ ಪತ್ನಿ.
ವಿಶ್ರಾಂತಿಗಾಗಿ ದಂಪತಿ ಮಧ್ಯಾಹ್ನ ಮಲಗಿದ್ದ ಸಂದರ್ಭದಲ್ಲಿ ಹಾವು ಕಚ್ಚಿದರೂ ತಕ್ಷಣ ಗೊತ್ತಾಗಿರಲಿಲ್ಲ.ಒಂದು ತಾಸಿನವರೆಗೂ ಹಾವು ಹಾಸಿಗೆಯೊಳಗೆ ಇತ್ತು. ಮಹಿಳೆಯು ತಲೆ ಸುತ್ತು ಬರುತ್ತಿದೆ ಎಂದು ಎದ್ದಾಗಲೇ ಹಾವು ಸಹ ಹಾಸಿಗೆಯಿಂದ ಹೊರ ಬಂತು ಎಂದು ತಿಳಿದುಬಂದಿದೆ.
ಲಾಕ್‌ಡೌನ್ಇದ್ದುದರಿಂದ ತಕ್ಷಣ ನಗರದ ಆಸ್ಪತ್ರೆಗೆ ಕರೆದೊಯ್ಯಲು ವಾಹನ ಚಾಲಕರೂ ಬರಲಿಲ್ಲ ಎನ್ನಲಾಗಿದೆ. ನಾಟಿ ಔಷಧಿ ಕೊಡಿಸಿದರೂ ಪ್ರಯೋಜನವಾಗದೆ ಮಹಿಳೆ ಮೃತಪಟ್ಟರು. ಅವರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.