ADVERTISEMENT

ಶ್ರೀರಾಮುಲು ನಿಂದನೆ ಖಂಡನೆ: ಟಿ. ಪರಮೇಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 15:34 IST
Last Updated 28 ಜನವರಿ 2025, 15:34 IST
ಶ್ರೀರಾಮುಲು 
ಶ್ರೀರಾಮುಲು    

ಹೂವಿನಹಡಗಲಿ: ‘ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ಜನಾರ್ದನ ರೆಡ್ಡಿ ಏಕವಚನದಲ್ಲಿ ನಿಂದಿಸಿರುವುದು ಖಂಡನೀಯ’ ಎಂದು ವಾಲ್ಮೀಕಿ ಸಮಾಜದ ಮುಖಂಡ ಟಿ. ಪರಮೇಶ್ವರಪ್ಪ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶ್ರೀರಾಮುಲು ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆಂದು ಹೇಳಿದ್ದ ರೆಡ್ಡಿ, ಈಗ ರಾಮುಲು ಕುಟುಂಬದ ವಿಚಾರಗಳನ್ನು ಪ್ರಸ್ತಾಪಿಸಿ ಹಗುರವಾಗಿ ಟೀಕಿಸಿರುವುದು ನೋವುಂಟು ಮಾಡಿದೆ. ರಾಮುಲು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಅನಿಲ್ ಕುಮಾರ್ ಮಾತನಾಡಿ, ‘ಶ್ರೀರಾಮುಲು ತೇಜೋವಧೆಯನ್ನು ರೆಡ್ಡಿ ನಿಲ್ಲಿಸಬೇಕು’ ಎಂದರು. ರಾಮುಲು ಅಭಿಮಾನಿ ಬಳಗದ ಲಕ್ಷ್ಮಣ ಬಾರ್ಕಿ, ಕಿರಣಕುಮಾರ್, ಬಿ. ಶಿವಾನಂದಪ್ಪ, ಹನುಮಂತಪ್ಪ, ಮಂಜುನಾಥ, ಅಭಿಷೇಕ, ಮಲ್ಲಿಕಾರ್ಜುನ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.