ADVERTISEMENT

ಕೂಡ್ಲಿಗಿಯಿಂದ ಸ್ಪರ್ಧೆ: ಶ್ರೀರಾಮುಲು ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 16:30 IST
Last Updated 22 ಫೆಬ್ರುವರಿ 2025, 16:30 IST
ಮಾಜಿ ಸಚಿವ ಬಿ. ಶ್ರೀರಾಮುಲು ಶುಕ್ರವಾರ ವಿಜಯನಗರ ಜಿಲ್ಲೆಯ ಕೂಡ್ಲಿಯಿಂದ ಕೊಟ್ಟೂರು ಜಾತ್ರೆಗೆ ಪಾದಯಾತ್ರೆ ಕೈಗೊಂಡರು. 
ಮಾಜಿ ಸಚಿವ ಬಿ. ಶ್ರೀರಾಮುಲು ಶುಕ್ರವಾರ ವಿಜಯನಗರ ಜಿಲ್ಲೆಯ ಕೂಡ್ಲಿಯಿಂದ ಕೊಟ್ಟೂರು ಜಾತ್ರೆಗೆ ಪಾದಯಾತ್ರೆ ಕೈಗೊಂಡರು.    

ಬಳ್ಳಾರಿ: ಮುಂದಿನ ವಿಧಾನಸಭಾ ಚುನಾಣೆಯಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿರುವ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಕ್ಷೇತ್ರ ಸಂಘಟನೆಯ ಭಾಗವಾಗಿ ಶುಕ್ರವಾರ ಕೂಡ್ಲಿಗಿಯ ಕೊತ್ತಲ ಆಂಜನೇಯ ಸ್ವಾಮಿ ದೇಗುಲದಿಂದ ಕೊಟ್ಟೂರು ಜಾತ್ರೆಗೆ ಪಾದಯಾತ್ರೆ ಕೈಗೊಂಡರು. 

ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಸಂಜೆ 6ಕ್ಕೆ ಪಾದಯಾತ್ರೆ ಆರಂಭಿಸಿದ ಅವರು ರಾತ್ರಿ 10ಕ್ಕೆ ಕೊಟ್ಟೂರಿಗೆ ತಲುಪಿದರು. ಈ ವೇಳೆ ಭಾರಿ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. 

‌‘ಕೂಡ್ಲಿಗಿಯಿಂದ ಸ್ಪರ್ಧಿಸುವುದು ನಿಶ್ಚಿತ. ಅದಕ್ಕೆ ಪೂರಕವಾಗಿ ಪಾದಯಾತ್ರೆ ಮೂಲಕ ಸಂಘಟನಾ ಯಾತ್ರೆ ಆರಂಭಿಸಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಶಕ್ತಿ ಸಿಗಲಿ ಎಂದು ಆಂಜನೇಸ್ವಾಮಿ ಮತ್ತು ಕೊಟ್ಟೂರೇಶ್ವರನಲ್ಲಿ ಕೇಳಿಕೊಂಡಿದ್ದೇನೆ’ ಎಂದು ಶ್ರೀರಾಮುಲು ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

‘ಕೇಂದ್ರದ ಬಿಜೆಪಿ ನಾಯಕರು ಶಿವರಾತ್ರಿ ಬಳಿಕ ಭೇಟಿಯಾಗಲು ತಿಳಿಸಿದ್ದಾರೆ. ಸಂಸತ್‌ ಅಧಿವೇಶನ ಮುಗಿದಿದೆ. ಪ್ರಧಾನಿ ಮೋದಿಯೂ ವಿದೇಶ ಪ್ರವಾಸ ಮುಗಿಸಿ, ಮರಳಿದ್ದಾರೆ. ಹಬ್ಬದ ಬಳಿಕ ದೆಹಲಿಗೆ ಹೋಗುತ್ತೇನೆ. ವರಿಷ್ಠರ ಎದುರು ಎಲ್ಲವನ್ನೂ ಚರ್ಚಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.