ADVERTISEMENT

ಶ್ರೀರಾಮುಲು ಕುಟುಂಬ ರಾಜಕಾರಣ ಸಲ್ಲದು: ವೈದ್ಯ ಟಿ.ಆರ್.ಶ್ರೀನಿವಾಸ ಅಸಮಾಧಾನ!

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 16:45 IST
Last Updated 14 ಅಕ್ಟೋಬರ್ 2018, 16:45 IST
ವೈದ್ಯ ಟಿ.ಆರ್.ಶ್ರೀನಿವಾಸ್
ವೈದ್ಯ ಟಿ.ಆರ್.ಶ್ರೀನಿವಾಸ್   

ಬಳ್ಳಾರಿ: ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಕುಟುಂಬ ರಾಜಕಾರಣ ಮಾಡುತ್ತಿದ್ದು, ಲೋಕಸಭೆಯ ಉಚುನಾವಣೆಯಲ್ಲಿ ಸಹೋದರಿ ಜೆ.ಶಾಂತಾಗೆ ಮಣೆ ಹಾಕಿರುವುದು ಅದನ್ನು ಸಾಬೀತುಮಾಡಿದೆ ಎಂದು ಡಾ.ಟಿ.ಆರ್.ಶ್ರೀನಿವಾಸ ದೂರಿದರು.

ನಗರದಲ್ಲಿ ಭಾನುವಾರ ತಮ್ಮ ಆಸ್ಪತ್ರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣದಿಂದ ಬೇಸತ್ತು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಘಟಕದ ಸಂಚಾಲಕ‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆನೆ ಎಂದರು.

ಒಂದೇ ಕುಟುಂಬದವರು ಸ್ಥಾನಮಾನ ಪಡೆದುಕೊಂಡರೆ ನಾವೇನು ಮಾಡುವುದು? ಮೂರ್ನಾಲ್ಕು ಬಾರಿ ಬೇರೆ ಬೇರೆ ಚುನಾವಣೆಗಳಲ್ಲಿ ಟಿಕೆಟ್ ನೀಡುವ ಭರವಸೆ ನೀಡಿ ಮೋಸ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂಡೂರಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದ ನಾನು ಪಕ್ಷದ ಕಟ್ಟುಪಾಡುಗಳಿಗೆ ಬಿದ್ದು ಹಿಂದೆ ಸರಿದಿದ್ದೆ.

ADVERTISEMENT

5-6 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೆನೆ. ಆದರೆ ಪಕ್ಷ ನನ್ನನ್ನು ಗುರುತಿಸಿಲ್ಲ. ಈ ಬಾರಿ ಯಾರ ಮಾತಿಗೂ ಜಗ್ಗದೆ, ಸ್ಪರ್ಧಿಸಲಿದ್ದೆನೆ‌. ತಮ್ಮ ಬಳಿ ಹಣ ಬಲವಿಲ್ಲದಿದ್ದರೆನು ಕೈಮುಗಿದು ಜನರ ಬಳಿ ಹೋಗುತ್ತೆನೆ. ಜಿಲ್ಲೆಯ 9 ತಾಲ್ಲೂಕುಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ, ಉಚಿತ ಶಿಬಿರಗಳನ್ನು ನಡೆಸಿದ್ದೆನೆ‌ ಎಂದರು.

ಇಂದು(ಸೋಮವಾರ) ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೆನೆ. ಕಡಿಮೆ ಅವಧಿಯಾಗಿದ್ದರೆನು ಒಂದು ದಿನ ಸೇವೆ ಸಲ್ಲಿಸುವ ಅವಕಾಶ ಸಿಕ್ಕರೆ ಸಾಕು. ನಿಗದಿತ ಅವಧಿಯ ಅಧಿಕಾರಕ್ಕಾಗಿ ಕಾಯುವ ನಾಯಕ ನಾನಲ್ಲ. ಜಿಲ್ಲೆಯ ಜನರು ವಿದ್ಯಾವಂತರಿಗೆ ಮಣೆ ಹಾಕುತ್ತಾರೆ ಎಂಬ ನಂಬಿಕೆ ಇದೆ‌. ತಾವು ನರ ಮಾನಸಿಕ ತಜ್ಞರಾಗಿದ್ದು, ಜನರ ನಾಡಿ ಮಿಡಿತವನ್ನು ಬಲ್ಲೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಬೆಳಿಗ್ಗೆ 11 ರ ನಂತರ ಎಲ್ಲಾ ಜನಾಂಗದ ಪ್ರಮುಖ ಇಬ್ಬರು ನಾಯಕರೊಂದಿಗೆ ತೆರಳಿ ಸರಳವಾಗಿ ನಾಮಪತ್ರ ಸಲ್ಲಿಸಲಿದ್ದೆನೆ. ಯಾವುದೇ ಮಾನಸಿಕ, ದೈಹಿಕ ಒತ್ತಡಕ್ಕೆ ಮಣಿಯುವುದಿಲ್ಲ. ತಮ್ಮ ಬಗ್ಗೆ ಜನರಿಗಿರುವ ಅಭಿಪ್ರಾಯ ಈ ಚುನಾವಣೇಯಲ್ಲಿ ತಿಳಿಯಲಿದ್ದು, ಜನಾದೇಶಕ್ಕೆ ತಲೆಬಾಗುತ್ತೇನೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾವಿನಹಳ್ಳಿ ವೀರೇಶ್, ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.