ಬಳ್ಳಾರಿ: ‘ಜಾತಿ ಜನಗಣತಿಯಲ್ಲಿ ಪರಿಶಿಷ್ಟ ಪಂಗಡದ ಸಂಖ್ಯೆ ಕಡಿಮೆ ತೋರಿಸಲಾಗಿದೆ. ದೋಷಪೂರಿತ ಈ ವರದಿಯನ್ನು ತಿರಸ್ಕರಿಸಿ, ನಮ್ಮ ಹಕ್ಕಿನ ಪಾಲಿಗೆ ಹೋರಾಡುವೆ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
‘ಎಕ್ಸ್’ ಖಾತೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ದೇಶದ ಜನಗಣತಿ ಪ್ರಕಾರ, ರಾಜ್ಯದಲ್ಲಿ 2001ರಲ್ಲಿ ಎಸ್‌ಟಿ ಜನಸಂಖ್ಯೆ 34,63,986 (ಶೇ 6.6) ಇತ್ತು. 2011ರಲ್ಲಿ 42,48,987 (ಶೇ 6.95)ಕ್ಕೆ ಏರಿತ್ತು. ಇತ್ತೀಚಿನ ಕಾಂತರಾಜ್ ವರದಿಯು ನಮ್ಮ ಸಂಖ್ಯೆ 42,81,289 (ಶೇ 7.16) ಎಂದು ಹೇಳುತ್ತಿದೆ. ಸಮೀಕ್ಷೆಯು ದೋಷಗಳಿಂದ ಕೂಡಿದೆ’ ಎಂದು ಹೇಳಿದ್ದಾರೆ.
‘ಪ್ರತಿ ಮನೆಯನ್ನು ತಲುಪುವಲ್ಲಿ ಸಮೀಕ್ಷೆ ವಿಫಲವಾಗಿದೆ. ನಮ್ಮ ಸಮುದಾಯವನ್ನು ಈ ವರದಿ ಪ್ರತಿನಿಧಿಸುತ್ತದೆ ಎಂದು ಹೇಳಲು ಆಗದು. ಇದು ಸಾಮಾಜಿಕ ನ್ಯಾಯವಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.