ವಂಚನೆ
ಬಳ್ಳಾರಿ: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶ ಕೊಡಿಸುವುದಾಗಿ ನಂಬಿಸಿ, ನಗರದ ವ್ಯಕ್ತಿಯೊಬ್ಬರಿಗೆ ₹25.20 ಲಕ್ಷ ವಂಚಿಸಿದ ಕುರಿತು ನಗರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್‌ಬುಕ್ ನೋಡುವಾಗ ಬಂದ ಜಾಹೀರಾತು ಕ್ಲಿಕ್ ಮಾಡಿದ್ದ ವ್ಯಕ್ತಿಯನ್ನು ವಾಟ್ಸ್‌ಆ್ಯಪ್ ಗ್ರುಪ್‌ಗೆ ಸೇರಿಸಲಾಗಿತ್ತು. ಅಲ್ಲಿ ಷೇರು ಮಾರುಕಟ್ಟೆ ಬಗ್ಗೆ ವಿವರಿಸಲಾಗಿತ್ತು. ಶೇ 15ರಷ್ಟು ಲಾಭಾಂಶ ನೀಡುವ ಮಾತು ನಂಬಿದ ವ್ಯಕ್ತಿ ಜುಲೈ 3ರಿಂದ 28ರವರೆಗೆ ವಂಚಕರು ಹೇಳಿದ ಖಾತೆಗೆ ಒಟ್ಟು ₹25,20,934 ಹಾಕಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.