ADVERTISEMENT

ಸಿರುಗುಪ್ಪ: ‘ಜನರ ಸಹಕಾರದಿಂದ ಸರ್ಕಾರಿ ಶಾಲೆಗಳ ಉಳಿವು’

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:20 IST
Last Updated 7 ಜೂನ್ 2025, 14:20 IST
ಸಿರುಗುಪ್ಪ ತಾಲ್ಲೂಕಿನ ಕುಡುದರಹಾಳು ಗ್ರಾಮದಲ್ಲಿ ನಿರ್ಮಾಣವಾದ ಸರ್ಕಾರಿ ಪ್ರೌಢಶಾಲೆ ಶಾಲೆಯ ನೂತನ ಕೊಠಡಿಗಳನ್ನು ಶನಿವಾರ ಶಾಸಕ ಬಿ.ಎಂ.ನಾಗರಾಜ ಉದ್ಘಾಟಿಸಿದರು
ಸಿರುಗುಪ್ಪ ತಾಲ್ಲೂಕಿನ ಕುಡುದರಹಾಳು ಗ್ರಾಮದಲ್ಲಿ ನಿರ್ಮಾಣವಾದ ಸರ್ಕಾರಿ ಪ್ರೌಢಶಾಲೆ ಶಾಲೆಯ ನೂತನ ಕೊಠಡಿಗಳನ್ನು ಶನಿವಾರ ಶಾಸಕ ಬಿ.ಎಂ.ನಾಗರಾಜ ಉದ್ಘಾಟಿಸಿದರು   

ಸಿರುಗುಪ್ಪ: ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯವಾಗುತ್ತವೆ ಎಂದು ಶಾಸಕ ಬಿ.ಎಂ.ನಾಗರಾಜ ಹೇಳಿದರು.

ತಾಲ್ಲೂಕಿನ ಕುಡುದರಹಾಳು ಗ್ರಾಮದಲ್ಲಿ 2024-25ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ನಬಾರ್ಡ್ ಯೋಜನೆ ಅಡಿಯಲ್ಲಿ ನಿರ್ಮಾಣವಾದ ಸರ್ಕಾರಿ ಪ್ರೌಢಶಾಲೆ ಶಾಲೆಯ ನೂತನ ಕೊಠಡಿಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರಗಡ್ಡೆ ಈರಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕರಿಬಸಪ್ಪ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ವೈ.ರಾಮಸ್ವಾಮಿ ಸಾಹುಕಾರ್, ಶಿಕ್ಷಣ ಸಮನ್ವಯಾಧಿಕಾರಿ ತಮ್ಮನಗೌಡ, ಮುಖಂಡರಾದ ಸಿದ್ದಯ್ಯ ಸ್ವಾಮಿ, ಗಿರೀಶ್ ಗೌಡ, ರಾಘವೇಂದ್ರ ಆಚಾರಿ, ತಾಯಪ್ಪ, ದ್ಯಾವಣ್ಣ, ಮುದುಕಪ್ಪ, ಕುರುಬರು ದ್ಯಾವಣ್ಣ, ಗೊರವರ ಶ್ರೀನಿವಾಸ್, ಬಿ.ಉಮೇಶ್ ಗೌಡ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.