ADVERTISEMENT

‘ವಿವೇಕಾನಂದರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸದಿರಿ‘

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 4:56 IST
Last Updated 14 ಜನವರಿ 2022, 4:56 IST
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ಸಪ್ತಾಹದಲ್ಲಿ ಜಿಲ್ಲಾ ನ್ಯಾಯಾಧೀಶ ಶುಭವೀರ್ ಜೈನ್ ಮಾತನಾಡಿದರು
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ಸಪ್ತಾಹದಲ್ಲಿ ಜಿಲ್ಲಾ ನ್ಯಾಯಾಧೀಶ ಶುಭವೀರ್ ಜೈನ್ ಮಾತನಾಡಿದರು   

ಹೊಸಪೇಟೆ (ವಿಜಯನಗರ): ನಗರದ ವಿವಿಧ ಕಡೆಗಳಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹ ಆಚರಿಸಲಾಯಿತು. ಅದರ ವಿವರ ಇಂತಿದೆ.

ಷಾ ಭವರ್‌ಲಾಲ್ ಬಾಬುಲಾಲ್ ನಾಹರ್‌ ಬಿಎಡ್ ಕಾಲೇಜು:

ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷ ಕರಿಬಸವರಾಜ ಬಾದಾಮಿ ಪುಷ್ಪಗೌರವ ಸಲ್ಲಿಸಿ, ಹಾಡು ಹಾಡಿದರು. ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ್‌ ಶಾಸ್ತ್ರಿ, ಸ್ವಾಮಿ ವಿವೇಕಾನಂದರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ಅವರು ಅವರ ಜ್ಞಾನದ ಮೂಲಕ ವಿಶ್ವದಲ್ಲಿ ಮನೆ ಮಾತಾಗಿದ್ದರು ಎಂದರು.

ADVERTISEMENT

ಪ್ರಾಂಶುಪಾಲ ಎನ್.ವಿಶ್ವನಾಥಗೌಡ, ಐಕ್ಯೂಎಸಿಯ ಸಂಯೋಜಕ ಡಾ. ಜಗದೀಶ, ಎನ್.ಎಸ್.ರೇವಣಸಿದ್ಧಪ್ಪ, ಪವಿತ್ರ ಕೆ, ಲಲಿತಾ. ಕೆ, ರಜಿಯಾ, ಕೌಸರ್, ತೇಜಸ್ವಿನಿ ಪಾಟೀಲ ಇದ್ದರು.

ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು:

ಸಂಚಾರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಹಾಂತೇಶ ಸಜ್ಜನ್ ಮಾತನಾಡಿ, ರಸ್ತೆ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಿದಲ್ಲಿ ಅಪಘಾತಗಳನ್ನು ತಡೆಯಬಹುದು. ಅಮೂಲ್ಯ ಜೀವ ಉಳಿಸಬಹುದು ಎಂದರು.

ಪ್ರಾಂಶುಪಾಲ ಬಿ.ಜಿ.ಕನಕೇಶಮೂರ್ತಿ, ಸಾಂಸ್ಕೃತಿಕ ವಿಭಾಗದ ಸಂಚಾಲಕ ನಾಗಣ್ಣ ಕಿಲಾರಿ, ಐಕ್ಯೂಎಸಿ ಮುಖ್ಯಸ್ಥ ಟಿ.ಎಚ್.ಬಸವರಾಜ, ರಾಷ್ಟ್ರೀಯ ಸೇವಾ ಯೋಜನೆಯ ಕೆ.ವೆಂಕಟೇಶ್, ದೈಹಿಕ ನಿರ್ದೇಶಕ ಮಂಜುನಾಥ ಆರೆಂಟನೂರ ಇದ್ದರು.

ಪ್ರೌಢದೇವರಾಯ ತಾಂತ್ರಿಕ ಕಾಲೇಜು:

‘ಮಗುವಿನಗರ್ಭಾವಸ್ಥೆಯಿಂದಹಿಡಿದುಮಾನವನಜೀವನದಪ್ರತಿಹಂತದಲ್ಲಿಯೂಕಾನೂನಿನಬಗ್ಗೆತಿಳವಳಿಕೆಯ ಅವಶ್ಯಕತೆಇದೆ‘ಎಂದು ಜಿಲ್ಲಾನ್ಯಾಯಾಧೀಶಶುಭವೀರ್ಜೈನ್ತಿಳಿಸಿದರು.

ತಾಲ್ಲೂಕುಕಾನೂನುಸೇವಾಸಮಿತಿಯಅಧ್ಯಕ್ಷ ಪದ್ಮಪ್ರಸಾದ್, ಜೆ.ಎಂ.ಎಫ್.ಸಿ ನ್ಯಾಯಾಧೀಶ ಜಿ.ಸಂಜೀವ್ ಕುಮಾರ್, ಎ.ಕರುಣಾನಿಧಿ, ಕಾಲೇಜು ಆಡಳಿತಮಂಡಳಿಅಧ್ಯಕ್ಷಪಲ್ಲೇದದೊಡ್ಡಪ್ಪ, ಪ್ರಾಂಶುಪಾಲ ಎಸ್.ಎಂ.ಶಶಿಧರ್, ಆರ್.ಬಸವರಾಜ್, ಕೆ.ವಿ.ಬಸವರಾಜ್,ಎಸ್.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.