
ತೆಕ್ಕಲಕೋಟೆ: ಪಟ್ಟಣದ ಕ್ಲಸ್ಟರ್ ಮಟ್ಟದ ಸರ್ಕಾರಿ ಶಾಲೆಗಳಲ್ಲಿ ಎಸ್ಎನ್ಎಸ್ ಫ್ರೆಂಡ್ಸ್ ಫೌಂಡೇಶನ್ ವತಿಯಿಂದ ನವೋದಯ, ಮೊರಾರ್ಜಿ ದೇಸಾಯಿ ವಸತಿಶಾಲೆಗಳ ಪ್ರವೇಶಕ್ಕಾಗಿ ಪೂರ್ವಸಿದ್ಧತಾ ಪರೀಕ್ಷೆ ಶನಿವಾರ ನಡೆಸಲಾಯಿತು.
ಪಟ್ಟಣದ 7 ಸರ್ಕಾರಿ ಶಾಲೆಗಳ 5ನೇ ತರಗತಿಯ ಒಟ್ಟು 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಫೌಂಡೇಶನ್ ಅಧ್ಯಕ್ಷ ಎಸ್ ನರೇಂದ್ರ ಸಿಂಹ ಮಾತನಾಡಿ, ‘ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು, ಗುಣಾತ್ಮಕ ಶಿಕ್ಷಣ ಹೊಂದಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಉಚಿತ ಪುಸ್ತಕ ವಿತರಿಸಿ ಹಾಗೂ ಮಾದರಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಚಿತ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.
ಶಾಲಾ ಮುಖ್ಯಶಿಕ್ಷಕರಾದ ಚಂದ್ರಶೇಖರ, ಶೋಯಬ್, ನಾರಾಯಣಪ್ಪ, ಗೌರವ ಶಿಕ್ಷಕ ಸಿದ್ದಯ್ಯ, ಶಿಕ್ಷಕರಾದ ವೆಂಕಟೇಶ್, ರುದ್ರೇಶ್, ವಿರೇಶ್, ಸಿದ್ದಾರ್ಥ್, ನ ರಸಪ್ಪ ಮಲ್ಲಿಕಾರ್ಜುನ್, ಫೌಂಡೇಶನ್ ಸದಸ್ಯರಾದ ಹನುಮಂತ, ಜಗದೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.