ADVERTISEMENT

ಮೂರು ತಿಂಗಳಲ್ಲಿ ₹14 ಲಕ್ಷ ಸಂಗ್ರಹ

ಹಂಪಿ ವಿರೂಪಾಕ್ಷ ದೇಗುಲದ ಹುಂಡಿ ಹಣ ಎಣಿಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 14:04 IST
Last Updated 2 ಆಗಸ್ಟ್ 2019, 14:04 IST
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಹುಂಡಿಗಳಲ್ಲಿ ಸಂಗ್ರಹವಾದ ಹಣದ ಎಣಿಕೆ ಕಾರ್ಯ ಶುಕ್ರವಾರ ನಡೆಯಿತು
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಹುಂಡಿಗಳಲ್ಲಿ ಸಂಗ್ರಹವಾದ ಹಣದ ಎಣಿಕೆ ಕಾರ್ಯ ಶುಕ್ರವಾರ ನಡೆಯಿತು   

ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಐದು ಹುಂಡಿಗಳಲ್ಲಿ ಮೂರು ತಿಂಗಳಲ್ಲಿ ಸಂಗ್ರಹವಾದ ಹಣದ ಎಣಿಕೆ ಕಾರ್ಯ ಶುಕ್ರವಾರ ನಡೆದಿದ್ದು, ಒಟ್ಟು ₹14,29,220 ಸಂಗ್ರಹವಾಗಿದೆ.

ವಿರೂಪಾಕ್ಷ ಸ್ವಾಮಿಯ ಐದು, ಭುವನೇಶ್ವರಿ, ಪಾರ್ವತಿ, ದುರ್ಗಾದೇವಿ ಹಾಗೂ ನವಗ್ರಹದ ತಲಾ ಒಂದು ಹುಂಡಿಯಲ್ಲಿ ಏಪ್ರಿಲ್‌ 16ರಿಂದ ಆ. 2ರ ವರೆಗೆ ಸಂಗ್ರಹವಾದ ಹುಂಡಿಗಳನ್ನು ಶುಕ್ರವಾರ ತೆರೆಯಲಾಯಿತು.

ವಿದ್ಯಾರಣ್ಯ ಭಾರತಿ ಸ್ವಾಮೀಜಿ, ವಿರೂಪಾಕ್ಷ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ರಾವ್‌ ಅವರ ಸಮ್ಮುಖದಲ್ಲಿ ಹಣ ಎಣಿಸಲಾಯಿತು. ₹2,000 ಮೌಲ್ಯದ 13, ₹500 ಮೊತ್ತದ 525 ಹಾಗೂ ₹200 ಬೆಲೆಯ 218, ₹100ರ 3,883 ನೋಟುಗಳು ಒಳಗೊಂಡಂತೆ ಚಿಲ್ಲರೆ ಹಣ ಭಕ್ತರು ಹುಂಡಿಗೆ ಹಾಕಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.