ADVERTISEMENT

ಐದು ಬೈಕ್‌ಗಳೊಂದಿಗೆ ಕಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 14:33 IST
Last Updated 24 ಜೂನ್ 2019, 14:33 IST
ಬೈಕ್‌ಗಳೊಂದಿಗೆ ವಶಕ್ಕೆ ತೆಗೆದುಕೊಂಡಿರುವ ಆರೋಪಿ ಜಿಲಾನ್‌ನನ್ನು ಪೊಲೀಸರು ಸೋಮವಾರ ಮಾಧ್ಯಮದವರ ಎದುರು ಪ್ರಸ್ತುತಪಡಿಸಿದರು
ಬೈಕ್‌ಗಳೊಂದಿಗೆ ವಶಕ್ಕೆ ತೆಗೆದುಕೊಂಡಿರುವ ಆರೋಪಿ ಜಿಲಾನ್‌ನನ್ನು ಪೊಲೀಸರು ಸೋಮವಾರ ಮಾಧ್ಯಮದವರ ಎದುರು ಪ್ರಸ್ತುತಪಡಿಸಿದರು   

ಹೊಸಪೇಟೆ: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಸಿದ್ದಲಿಂಗಪ್ಪ ಚೌಕಿ ನಿವಾಸಿ ಜಿಲಾನ್‌ ಎಂಬಾತನನ್ನು ಸೋಮವಾರ ಪಟ್ಟಣ ಠಾಣೆ ಪೊಲೀಸರು ಬಂಧಿಸಿ, ₹1.55 ಲಕ್ಷ ಮೌಲ್ಯದ ಐದು ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

‘ನಗರದ ವಿವಿಧ ಕಡೆಗಳಲ್ಲಿ ಜಿಲಾನ್‌ ಬೈಕುಗಳನ್ನು ಕಳವು ಮಾಡಿದ್ದ. ನಮ್ಮ ಪೊಲೀಸ್‌ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ‘ ಎಂದು ಡಿ.ವೈ.ಎಸ್ಪಿ. ಕೆ. ಶಿವಾರೆಡ್ಡಿ ತಿಳಿಸಿದರು.

ಗ್ರಾಮೀಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಪರಶಪ್ಪ ಭಜಂತ್ರಿ, ಪಟ್ಟಣ ಠಾಣೆ ಪಿ.ಎಸ್‍.ಐ.ಗಳಾದ ಎಚ್.ಆರ್.ನಾಯ್ಕ, ವಿ.ಲಕ್ಷ್ಮಣ, ಎ.ಎಸ್‍.ಐ. ಎಲ್.ಕೃಷ್ಣ ಹಾಗೂ ಸಿಬ್ಬಂದಿ ಜೆ.ಹೆಗ್ಗಪ್ಪ, ಕಾಳ್ಯ ನಾಯ್ಕ, ಬಿ.ಷಣ್ಮುಖ, ಗಾಳೆಪ್ಪ ಹಾಗೂ ಬಿ.ಮಲ್ಲೇಶ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.