ಬಳ್ಳಾರಿ : ‘88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್‌ನಲ್ಲೇ ಬಳ್ಳಾರಿಯಲ್ಲೇ ಅದ್ದೂರಿಯಾಗಿ ನಡೆಸಲು ಪ್ರಯತ್ನಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಸಮ್ಮೇಳನಕ್ಕೆ ಹೊಸಪೇಟೆ ರಸ್ತೆಯ ಹಳೇ ಧಾರದ ಮಿಲ್ ಪಕ್ಕದ ಜಾಗ, ಕೊಳಗಲ್ ರಸ್ತೆ, ಕಪ್ಪಗಲ್ ರಸ್ತೆ ಸೇರಿ ಮೂರು ಕಡೆ ಸ್ಥಳ ಪರಿಶೀಲಿಸಿದ್ದೇವೆ. ಎಲ್ಲರಿಗೂ ಅನುಕೂಲ ಆಗುವಂತಹ ಸ್ಥಳವನ್ನು ಆಯ್ಕೆ ಮಾಡಲಾಗುವುದು’ ಎಂದರು.
‘ಕಸಾಪದ ಅಧ್ಯಕ್ಷರ ಮೇಲಿನ ಆರೋಪಗಳ ಸಂಬಂಧ ವಿಚಾರಣೆ ನಡೆದಿದ್ದು, ಸ್ವಾಗತ ಸಮಿತಿ ರಚನೆಗೆ ಕೊಂಚ ತಡವಾಗಿದೆ. ಆದರೆ, ಶೀಘ್ರವೇ ಸ್ವಾಗತಿ ಸಮಿತಿ ರಚನೆಯಾಗಲಿದೆ’ ಎಂದು ಅವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.