ADVERTISEMENT

ಹುಬ್ಬಳ್ಳಿ–ಬಳ್ಳಾರಿ ರೈಲು ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 7:14 IST
Last Updated 11 ಏಪ್ರಿಲ್ 2019, 7:14 IST

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಬಳ್ಳಾರಿಯಿಂದ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯಿಂದ ಬಳ್ಳಾರಿಗೆ ಸಂಚರಿಸುತ್ತಿದ್ದ ರೈಲುಗಳ (ಸಂ. 51412/ 51411) ಏ. 11ರಿಂದ 13ರ ವರೆಗೆ ಹೊಸಪೇಟೆ–ಬಳ್ಳಾರಿ ನಡುವಿನ ಸಂಚಾರ ಭಾಗಶಃ ರದ್ದಾಗಿದೆ.

ಹುಬ್ಬಳ್ಳಿಯಿಂದ ಹೊರಡುವ ಮೀರಜ್‌ ಎಕ್ಸ್‌ಪ್ರೆಸ್‌ ರೈಲು (ಸಂ. 11048) ಏ. 12ರಿಂದ 29ರ ವರೆಗೆ ಬೆಳಗಾವಿ– ಮೀರಜ್‌ ನಡುವೆ ಸಂಚಾರ ಭಾಗಶಃ ರದ್ದಾಗಿದೆ. ಮೀರಜ್‌– ಲೋಂಡಾ ಪ್ಯಾಸೆಂಜರ್‌ (ಸಂ. 51431) ಬೆಳಗಾವಿಯಿಂದ ಲೋಂಡಾ ಮೂಲಕ ವೇಳಾಪಟ್ಟಿಯಂತೆ ಸಂಚರಿಸಲಿದೆ.

ಮೀರಜ್‌– ಲೋಂಡಾ ಪ್ಯಾಸೆಂಜರ್‌ ಏ. 13ರಿಂದ 30ರವರೆಗೆ (ರೈಲು ಸಂ. 51431) ಮೀರಜ್‌–ಬೆಳಗಾವಿ ನಡುವೆ ಸಂಚಾರ ಭಾಗಶಃ ರದ್ದುಗೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.