ADVERTISEMENT

ಅಂಗವೈಕಲ್ಯ ದೇಹಕ್ಕೆ, ಮನಕ್ಕಲ್ಲ: ಶರಣಬಸಯ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:36 IST
Last Updated 12 ಫೆಬ್ರುವರಿ 2026, 7:36 IST
ಗದಗ ಜಿಲ್ಲೆ ನೀಲಗುಂದ ಗ್ರಾಮದ ಶರಣಬಸಯ್ಯ ಹಿರೇಮಠ ಅವರು ತ್ರಿಚಕ್ರ ಸೈಕಲ್‌ನಲ್ಲಿ ಕೊಟ್ಟೂರು ಸುಕ್ಷೇತ್ರಕ್ಕೆ ಬರುವುದು ಗಮನ ಸೆಳೆಯಿತು
ಗದಗ ಜಿಲ್ಲೆ ನೀಲಗುಂದ ಗ್ರಾಮದ ಶರಣಬಸಯ್ಯ ಹಿರೇಮಠ ಅವರು ತ್ರಿಚಕ್ರ ಸೈಕಲ್‌ನಲ್ಲಿ ಕೊಟ್ಟೂರು ಸುಕ್ಷೇತ್ರಕ್ಕೆ ಬರುವುದು ಗಮನ ಸೆಳೆಯಿತು   

ಹೂವಿನಹಡಗಲಿ: ಕಾಲುಗಳ ಸ್ವಾಧೀನವಿಲ್ಲದ ಅಂಗವಿಕಲ ಭಕ್ತರೊಬ್ಬರು ಪಾದಯಾತ್ರೆ ತಂಡದೊಂದಿಗೆ ತ್ರಿಚಕ್ರ ಸೈಕಲ್ ನಲ್ಲಿ ಕೊಟ್ಟೂರು ಸುಕ್ಷೇತ್ರಕ್ಕೆ ಪಯಣ ಬೆಳೆಸಿ ಗಮನ ಸೆಳೆದಿದ್ದಾರೆ.

ಗದಗ ಜಿಲ್ಲೆ ಗದಗ ತಾಲ್ಲೂಕು ನೀಲಗುಂದ ಗ್ರಾಮದ ಅಂಗವಿಕಲ ಶರಣಬಸಯ್ಯ ನಿರ್ವಾಣಯ್ಯ ಹಿರೇಮಠ ಅವರು ತ್ರಿಚಕ್ರ ಸೈಕಲ್ ನಲ್ಲಿ ಕೊಟ್ಟೂರು ಸುಕ್ಷೇತ್ರಕ್ಕೆ ಪಯಣಿಸುವ ಮೂಲಕ ‘ಅಂಗವೈಕಲ್ಯ ದೇಹಕ್ಕೆ ಹೊರತು ಮನಸ್ಸಿಗೆ ಅಲ್ಲ’ ಎಂದು ಸಾರಿದ್ದಾರೆ.

ಅಂಗವಿಕಲ ಶರಣಬಸಯ್ಯ ಅವರ ಸಹಾಯಕ್ಕೆ ಪತ್ನಿ ದಿವ್ಯಶ್ರೀ ಹಾಗೂ ಸ್ನೇಹಿತರು ಜೊತೆಗಿದ್ದಾರೆ. ಕೊಟ್ಟೂರೇಶ್ವರ ಸ್ವಾಮಿಯನ್ನು ಮನದಲ್ಲಿ ನೆನೆಯುತ್ತ ಇವರ ಪಾದಯಾತ್ರೆ ತಂಡ ಭಕ್ತಿಯಿಂದ ಹೆಜ್ಜೆ ಹಾಕುತ್ತಿದೆ. ತಾಲ್ಲೂಕಿನ ಹೊಳಗುಂದಿ ಗ್ರಾಮಸ್ಥರು ಈ ತಂಡವನ್ನು ಸತ್ಕರಿಸಿ ಬೀಳ್ಕೊಟ್ಟರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.