ಕಂಪ್ಲಿ: ಇಲ್ಲಿಯ ಕೋಟೆ ಪ್ರದೇಶದ ಬಳಿಯ ಕಂಪ್ಲಿ-ಗಂಗಾವತಿ ತುಂಗಭದ್ರಾ ನದಿ ಸೇತುವೆ ಆರಂಭದ(ಬ್ರಿಡ್ಜ್ ಅಪ್ರೋಚ್) ಕಟ್ಟಡದ ಅಡಿ ಭಾಗದ ರಂಧ್ರದ ಮೂಲಕ ಒಂದು ತಿಂಗಳಿಂದ ನೀರು ಸೋರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಇಂಥ ಅವಸ್ಥೆಯಲ್ಲಿ ಇದೀಗ ಸೇತುವೆ ಆರಂಭದ ಕಟ್ಟಡದ ಒಳ ಭಾಗದಿಂದ ನೀರು ಹರಿದು ಬರುತ್ತಿದೆ. ಈ ನೀರು ಎಲ್ಲಿಂದ ಬರುತ್ತಿದೆ ಎನ್ನುವುದೇ ಎಲ್ಲರಿಗೂ ಅಚ್ಚರಿಯಾಗಿದೆ ಎಂದು ಸೇತುವೆ ಬಳಿಯ ಮೀನುಗಾರರು ತಿಳಿಸಿದರು.
ವಿಷಯ ತಿಳಿದ ಗಂಗಾವತಿ ಲೋಕೋಪಯೋಗಿ ಇಲಾಖೆ ಸೆಕ್ಷನ್ ಅಧಿಕಾರಿ ತಸ್ಲಿಮ್ ಶನಿವಾರ ಭೇಟಿ ನೀಡಿ ಪರಿಶೀಲಿಸಿ, ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
‘ಸೇತುವೆ ಒಳ ಭಾಗದಲ್ಲಿ, ಸೇತುವೆಗೆ ಹೊಂದಿಕೊಂಡಂತೆ ನೀರಿನ ಪೈಪ್‍ಗಳ ಮೂಲಕ ನೀರು ಸೋರಿಕೆಯಾಗಿ ಸೇತುವೆ ಅಡಿ ಭಾಗದ ಕಟ್ಟಡದ ಮೂಲಕ ನೀರು ಹರಿದು ಬರುತ್ತಿರುವ ಸಾಧ್ಯತೆ ಇದೆ. ತ್ವರಿತವಾಗಿ ನೀರು ಸೋರಿಕೆಗೆ ಕಾರಣವಾದ ಸ್ಥಳ ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಗಂಗಾವತಿ ಪಿಡಬ್ಲ್ಯುಡಿ ಎಇಇ ಜೆ.ವಿಶ್ವನಾಥ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.