ಹಗರಿಬೊಮ್ಮನಹಳ್ಳಿ: ಪಟ್ಟಣದ ಬೈಪಾಸ್ ರಸ್ತೆ ಮೇಲೆ ಎರಡು ಅಡಿಗಳಷ್ಟು ನೀರು ಹರಿದ ಪರಿಣಾಮ ಭಾನುವಾರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.
ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ
ಜಲಾಶಯದಿಂದ ಹಗರಿ ಹಳ್ಳದ ಮೂಲಕ ತುಂಗಭದ್ರೆಗೆ ನೀರು ಹರಿಸಲಾಯಿತು.
ಪಟ್ಟಣದ ಬೈಪಾಸ್ ರಸ್ತೆ ಸೇತುವೆ ಕೆಳಗೆ ನೀರು ಹರಿಯಲು ಪೈಪ್‌ಗಳಲ್ಲಿ ಹುಲ್ಲು ಸೇರಿದ್ದರಿಂದ ಸರಾಗವಾಗಿ ನೀರು ಹರಿಯಲು ಸಾಧ್ಯವಾಗದೆ ಸೇತುವೆ ಮೇಲೆ ಹರಿಯಿತು.
ತಾಲ್ಲೂಕಿನ ತಂಬ್ರಹಳ್ಳಿ, ಹಂಪಸಾಗರ, ನಂದಿಪುರ, ಗದ್ದಿಕೇರಿ, ಬನ್ನಿಗೋಳ, ಬ್ಯಾಸಿಗಿದೇರಿ, ಸೊಬಟಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಈ ಬೈಪಾಸ್ ರಸ್ತೆ ಅನುಕೂಲವಾಗಿತ್ತು, ಖಾಸಗಿ ಕಾಲೇಜ್‌ಗೆ ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ.
ಜಲಾಶಯದಿಂದ ಅಂದಾಜು 150 ಕ್ಯುಸೆಕ್ ನೀರು ತುಂಗಭದ್ರಾ ಜಲಾಶಯಕ್ಕೆ ಹೊರ ಬಿಡಲಾಗಿದೆ.
ಪುರಸಭೆ ಅಧಿಕಾರಿಗಳು ಬೆಳಗಿನ ಜಾವದಿಂದಲೇ ಸೇತುವೆ ಪೈಪ್‌ಗಳ ಬಳಿ ಸಿಕ್ಕಿಹಾಕಿಕೊಂಡಿದ್ದ ಹುಲ್ಲು, ಗಿಡಗಂಟಿಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು. ನೀರು ಹರಿದ ರಭಸಕ್ಕೆ ವಿದ್ಯುತ್ ಕಂಬವೊಂದು ನೆಲಕ್ಕೆ ಉರುಳಿದ ಆ ಲೈನ್ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಎಂಜಿನಿಯರ್ ಕಡಿತಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.