ADVERTISEMENT

ಎರಡು ತಾಸು ಜಿಟಿಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 13:01 IST
Last Updated 22 ಜುಲೈ 2019, 13:01 IST
ಸೋಮವಾರ ಹೊಸಪೇಟೆಯ ಮೇನ್‌ ಬಜಾರ್‌ನಲ್ಲಿ ಸುರಿವ ಮಳೆಯಲ್ಲೇ ಚಿಣ್ಣರು ನಲಿದಾಡುತ್ತ ಮನೆ ಕಡೆ ಹೆಜ್ಜೆ ಹಾಕಿದ ದೃಶ್ಯವನ್ನು ಛಾಯಾಗ್ರಾಹಕ ಬಿ. ಬಾಬುಕುಮಾರ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ
ಸೋಮವಾರ ಹೊಸಪೇಟೆಯ ಮೇನ್‌ ಬಜಾರ್‌ನಲ್ಲಿ ಸುರಿವ ಮಳೆಯಲ್ಲೇ ಚಿಣ್ಣರು ನಲಿದಾಡುತ್ತ ಮನೆ ಕಡೆ ಹೆಜ್ಜೆ ಹಾಕಿದ ದೃಶ್ಯವನ್ನು ಛಾಯಾಗ್ರಾಹಕ ಬಿ. ಬಾಬುಕುಮಾರ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ   

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ಎರಡು ಗಂಟೆಗೂ ಅಧಿಕ ಸಮಯ ಜಿಟಿಜಿಟಿ ಮಳೆಯಾಯಿತು.

ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಆರಂಭವಾದ ಮಳೆ ಐದು ಗಂಟೆಯ ವರೆಗೆ ನಿರಂತರವಾಗಿ ಸುರಿಯಿತು. ಮಧ್ಯಾಹ್ನ ಆರಂಭವಾದ ಮಳೆ ಸಂಜೆಯಾದರೂ ನಿಲ್ಲದ ಕಾರಣ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ದೈನಂದಿನ ಕೆಲಸ ಮುಗಿಸಿಕೊಂಡವರು ಮಳೆಯಲ್ಲೇ ನೆನೆದುಕೊಂಡು ಮನೆಗಳತ್ತ ಹೆಜ್ಜೆ ಹಾಕಿದರು.

ನಗರದ ಚಿತ್ತವಾಡ್ಗಿ, ಕಾಲೇಜು ರಸ್ತೆ, ಮೇನ್‌ ಬಜಾರ್‌ನಲ್ಲಿ ಚಿಣ್ಣರು ಮಳೆಯಲ್ಲಿ ನೆನೆಯುತ್ತ, ರಸ್ತೆ ಮೇಲೆ ನಿಂತ ನೀರಿನಲ್ಲಿ ಆಟವಾಡಿ, ಸಂಭ್ರಮಿಸುತ್ತ ಹೋಗುತ್ತಿರುವುದು ಕಂಡು ಬಂತು.

ADVERTISEMENT

ತಾಲ್ಲೂಕಿನ ಹೊಸೂರು, ನಾಗೇನಹಳ್ಳಿ, ಬಸವನದುರ್ಗ, ಧರ್ಮದಗುಡ್ಡ, ವ್ಯಾಸನಕೆರೆ, ವಡ್ಡರಹಳ್ಳಿ, ಬೈಲುವದ್ದಿಗೇರಿ, ಧರ್ಮಸಾಗರ, ಕಾಕುಬಾಳು, ಕಮಲಾಪುರ, ಸೀತಾರಾಮ ತಾಂಡಾ, ಮಲಪನಗುಡಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.