ADVERTISEMENT

ವಂದೇ ವಾಲ್ಮೀಕಿ ಕೋಕಿಲಂ...

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 11:09 IST
Last Updated 13 ಅಕ್ಟೋಬರ್ 2019, 11:09 IST
ಹೊಸಪೇಟೆಯ ಚಿತ್ರಕೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿತ್ರಕೇರಿ ಯುವಕರ ಬಳಗದ ಸದಸ್ಯರು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗೆ ಹೂಮಳೆಗರೆದು ಅಭಿಮಾನ ತೋರಿದರು
ಹೊಸಪೇಟೆಯ ಚಿತ್ರಕೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿತ್ರಕೇರಿ ಯುವಕರ ಬಳಗದ ಸದಸ್ಯರು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗೆ ಹೂಮಳೆಗರೆದು ಅಭಿಮಾನ ತೋರಿದರು   

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಎಲ್ಲೆಡೆ ‘ವಂದೇ ವಾಲ್ಮೀಕಿ ಕೋಕಿಲಂ..’ ಜಯಘೋಷ ಮೊಳಗಿದವು'. ವಿವಿಧ ಸಂಘ ಸಂಸ್ಥೆಗಳು ಜಯಂತಿ ಆಚರಿಸಿದ ವಿವರ ಕೆಳಗಿನಂತಿದೆ.

ಬ್ಲಾಕ್‌ ಕಾಂಗ್ರೆಸ್‌ ಸಮಿತಿ:

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಹೊಸಪೇಟೆ ಮತ್ತು ಕಮಲಾಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಆಚರಿಸಿದ ಜಯಂತಿಯಲ್ಲಿ ಮಾತನಾಡಿದ ಮುಖಂಡ ಮೊಹಮ್ಮದ್‌ ಇಮಾಮ್‌ ನಿಯಾಜಿ, ‘ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಬರೆದ ಶ್ರೇಷ್ಠ ಕವಿ. ಎಲ್ಲರೂ ಆ ರಾಮಾಯಣ ಓದಬೇಕು’ ಎಂದರು.

ADVERTISEMENT

ಮುಖಂಡರಾದ ವಿ. ಸೋಮಪ್ಪ, ಗುಜ್ಜಲ ನಾಗರಾಜ್, ನಿಂಬಗಲ್ ರಾಮಕೃಷ್ಣ, ಸತ್ಯನಾರಾಯಣಪ್ಪ, ವೆಂಕಪ್ಪ, ವಿನಾಯಕ ಶೆಟ್ಟರ್, ತೇಜು ನಾಯಕ, ಎಚ್.ಬಿ.ಶ್ರೀನಿವಾಸ, ಬಾಣದ ಗಣೇಶ, ಅಬುಲ್ ಕಲಾಂ ಆಜಾದ್, ತಿಮ್ಮಪ್ಪ ಯಾದವ್, ವಿಜಯ ಕುಮಾರ್, ಅಂಕ್ಲೇಶ್, ಅಬೂಬಕರ್, ಖಾನ್ ಸಾಬ್, ಮೀರ್ ಜಾಫರ್ ಇದ್ದರು.

ತಾಲ್ಲೂಕು ಕಚೇರಿ:

ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ತಹಶೀಲ್ದಾರ್‌ ಡಿ.ಜಿ. ಹೆಗಡೆ ಅವರು ಮಾಲಾರ್ಪಣೆ ಮಾಡಿದರು. ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಗುಜ್ಜಲ್‌ ಶಿವರಾಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಸಂತ, ಉಪ ನೋಂದಣಾಧಿಕಾರಿ ಪ್ರಭಾಕರ್‌, ಶಿರಸ್ತೇದಾರರಾದ ರಮೇಶ, ಶ್ರೀಧರ್‌ ಹಾಗೂ ಸಿಬ್ಬಂದಿ ಇದ್ದರು.

ಚಿತ್ರಕೇರಿ ಯುವಕರ ಬಳಗ:

ಬಳಗದ ಸದಸ್ಯರು ಚಿತ್ರಕೇರಿಯಲ್ಲಿನ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗೆ ಹೂಮಳೆಗರೆದು ಸಂಭ್ರಮದಿಂದ ಜಯಂತಿ ಆಚರಿಸಿದರು.

ಬಳಗದ ಮುಖಂಡರಾದಬಿಸಾಟಿ ದೊಡ್ಡ ತಾಯಪ್ಪ, ಗೋಸಲ ಭರಮಪ್ಪ, ಬಂಡೆ ರಂಗಪ್ಪ, ಸಿಂದಿಗಿ ದೇವೇಂದ್ರಪ್ಪ, ಕಿಚಿಡಿ ಮಂಜುನಾಥ, ಗುಜ್ಜಲ್ ರಾಮಾಂಜಿನಿ, ಕಿಚಿಡಿ ತಿಪ್ಪೇಶ್, ಬಂಡೆ ಅರುಣ್‌, ಗೋಸಲ ಬಸವರಾಜ, ಬಿ.ಬಾಬು ಕುಮಾರ, ಕಿಚಿಡಿ ದುರ್ಗಪ್ಪ, ಪೂಜಾರಿ ಹನುಮಂತಪ್ಪ, ಉಪನೇಶ್ ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.