ADVERTISEMENT

ವೇದಾವತಿ ನದಿಯಲ್ಲಿ ಈಜಲು ಹೋಗಿ ನಾಪತ್ತೆ: ಎರಡು ದಿನವಾದರೂ ಪತ್ತೆಯಾಗದ ಬಾಲಕರು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:28 IST
Last Updated 6 ನವೆಂಬರ್ 2025, 6:28 IST
<div class="paragraphs"><p>ಸಿರುಗುಪ್ಪ ತಾಲ್ಲೂಕಿನ ವೇದಾವತಿ ಹಗರಿ ನದಿ ಉಕ್ಕಿ ಹರಿಯುತ್ತಿದೆ</p></div>

ಸಿರುಗುಪ್ಪ ತಾಲ್ಲೂಕಿನ ವೇದಾವತಿ ಹಗರಿ ನದಿ ಉಕ್ಕಿ ಹರಿಯುತ್ತಿದೆ

   

ಬಳ್ಳಾರಿ: ‌ತಾಲೂಕಿನ ಹಗರಿ (ವೇದಾವತಿ) ನದಿಯಲ್ಲಿ ಮಂಗಳವಾರ ಈಜಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಸುಳಿವು ಎರಡು ದಿನವಾದರೂ ಇನ್ನೂ ಪತ್ತೆಯಾಗಿಲ್ಲ. 

ಮಂಗಳವಾರ ಮಧ್ಯಾಹ್ನ ನದಿಯಲ್ಲಿ ಈಜಲು ತೆರಳಿದ್ದ ವಿಷ್ಣುಸಾಯಿ (14), ಕಿರಣ್ ( 16) ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋಗಿದ್ದರು. 

ADVERTISEMENT

ಮೊದಲಿಗೆ ನದಿ ದಡದಲ್ಲಿ ಈಜಾಡುತ್ತಿದ್ದ ಬಾಲಕರು, ಬಳಿಕ ಮಧ್ಯಕ್ಕೆ ಹೋಗಿದ್ದು, ರಭಸವಾಗಿ ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪಿಡಿಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗೃಹರಕ್ಷಕದಳ ಮಂಗಳವಾರವೇ ರಕ್ಷಣಾ ಕಾರ್ಯ ಆರಂಭಿಸಿದ್ದರು. ಸಂಜೆಯಾಗುತ್ತಲೇ ಕಾರ್ಯಚರಣೆ ಸ್ಥಗಿತಗೊಳಿಸಿ, ಬುಧವಾರಕ್ಕೆ ಮತ್ತೆ ಹುಡುಕಾಟ ನಡೆಸುವ ನಿರ್ಧಾರಕ್ಕೆ ಬರಲಾಗಿತ್ತು. 

ಬುಧವಾರವು ಸುಮಾರು 20 ಸಿಬ್ಬಂದಿ ಹುಡುಕಾಟ ನಡೆಸಿದರೂ ಬಾಲಕರು ಪತ್ತೆಯಾಗಿಲ್ಲ. ಕಾರ್ಯಚರಣೆಯನ್ನು ಗುರುವಾರ ಮತ್ತೆ ಆರಂಭಿಸಲು ತೀರ್ಮಾನಿಸಲಾಗಿದೆ.

48 ಗಂಟೆಗಳ ಕಾರ್ಯಚರಣೆ ಬಳಿಕ ಪತ್ತೆ ಕಾರ್ಯವನ್ನು ನಿಲ್ಲಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.