ADVERTISEMENT

ಹೊಸಪೇಟೆ ತಾಲ್ಲೂಕು | ವಿಶ್ವಕರ್ಮ ಜಯಂತಿ ಅಚರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 12:56 IST
Last Updated 18 ಸೆಪ್ಟೆಂಬರ್ 2019, 12:56 IST
ವಿಶ್ವಕರ್ಮ ಜಯಂತಿ ಪ್ರಯುಕ್ತ ಹೊಸಪೇಟೆಯಲ್ಲಿ ಮೆರವಣಿಗೆ ನಡೆಯಿತು
ವಿಶ್ವಕರ್ಮ ಜಯಂತಿ ಪ್ರಯುಕ್ತ ಹೊಸಪೇಟೆಯಲ್ಲಿ ಮೆರವಣಿಗೆ ನಡೆಯಿತು   

ಹೊಸಪೇಟೆ: ತಾಲ್ಲೂಕು ವಿಶ್ವಕರ್ಮ ಸಮಾಜದಿಂದ ಮಂಗಳವಾರ ಸಂಜೆ ನಗರದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.

ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಜೆ. ಕನಕೇಶಮೂರ್ತಿ ಮಾತನಾಡಿ, ‘ಸುಂದರ ಕಲಾಕೃತಿಗಳನ್ನು ಮಾಡುವುದೇ ವಿಶ್ವಕರ್ಮ ಸಮಾಜದ ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಸಮಾಜದ ಏಳಿಗೆಯಲ್ಲಿ ಅವರ ಕೊಡುಗೆ ಬಹಳ ದೊಡ್ಡದು’ ಎಂದರು.

‘ವಿಶ್ವಕರ್ಮ ಸಮಾಜದ ಪ್ರತಿಯೊಬ್ಬರೂ ಒಂದೊಂದು ಬಗೆಯ ಕೌಶಲ ಹೊಂದಿದ್ದಾರೆ. ಅವರ ನಡೆ ನುಡಿಯಿಂದ ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಕೆ.ಎಲ್‌. ಸೃಜನ್‌, ಪಿ. ಮಧುಶ್ರೀ, ಎ. ಮಾನಸ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ವಿಶ್ವಕರ್ಮರ ಮೂರ್ತಿ, ಕುಲದೇವತೆ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ಆನೆಗುಂದಿ ಮಹಾಸಂಸ್ಥಾನದ ಸರಸ್ವತಿ ಪೀಠಾಧಿಪತಿ ಕಾಳಹಸ್ತೆಂದ್ರ ಸ್ವಾಮೀಜಿ, ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ವೀರಭದ್ರಪ್ಪಾಚಾರ್, ಮಹಿಳಾ ಮಂಡಳದ ಉಪಾಧ್ಯಕ್ಷೆ ಗುಣವತಿ, ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ಬಿ.ರವೀಂದ್ರ,ಮುಖಂಡರಾದ ದ್ಯಾಮಣ್ಣ ಬಡಿಗೇರ್, ಎನ್ ಕೆ.ಬ್ರಮ್ಮಯ್ಯ, ಜಂಬುನಾಥಾಚಾರ್, ಎಸ್.ಕುಮಾರ್, ವಿ.ಶಂಕ್ರಾಚಾರ್, ಶರಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.