ADVERTISEMENT

ಆಕಾಶ್‌ ಶಾಲೆ ವೆಬ್‌ಸೈಟ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 11:43 IST
Last Updated 16 ಏಪ್ರಿಲ್ 2021, 11:43 IST
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿದರು   

ಹೊಸಪೇಟೆ (ವಿಜಯನಗರ): ಇಲ್ಲಿನ ಚಿತ್ತವಾಡ್ಗಿಯ ಹಳೆ ಅಮರಾವತಿ ರಸ್ತೆಯ ಆಕಾಶ್ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಶಾಲೆಯ ವೆಬ್‌ಸೈಟ್‌ ಉದ್ಘಾಟನಾ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು.

ವೆಬ್‌ಸೈಟ್‌ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ, ‘2019ನೇ ಸಾಲಿನಲ್ಲಿ ಶಾಲೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 2020ರಲ್ಲಿ ಕೋವಿಡ್‌ ಬಂದರೂ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು ಎಂದು ಕೆಲಸ ಪೂರ್ಣಗೊಳಿಸಲಾಯಿತು. ಎಲ್‌.ಕೆ.ಜಿಯಿಂದ ಪಿಯುಸಿ ವರೆಗೆ ಶಾಲೆಗೆ ಸರ್ಕಾರದಿಂದ ಮಾನ್ಯತೆ ಸಿಕ್ಕಿದೆ’ ಎಂದು ಹೇಳಿದರು.

ಮುಖಂಡರಾದ ಸಿದ್ದನಗೌಡ, ಅರಳಿ ಕೊಟ್ರಪ್ಪ, ಎಂ.ಸಿ. ವೀರಸ್ವಾಮಿ, ಎಚ್.ವಿ. ಶರಣು ಸ್ವಾಮಿ, ರವಿಶಂಕರ್‌, ತಾರಿಹಳ್ಳಿ ಹನುಮಂತಪ್ಪ, ಶಮ್‌ಶುಲ್ಲಾ ಖಾನ್‌, ಅಶ್ವನ್‌ ಕೊತ್ತಂಬರಿ, ಸೈಯದ್‌ ನಾಜಿಮುದ್ದೀನ್‌, ಪ್ರಾಂಶುಪಾಲ ಮಹೇಶ, ವಿಜಯಕುಮಾರ್‌, ವೆಂಕಟೇಶ್‌, ಅಯೂಬ್‌ ಖಾನ್‌, ಶಿರೀಷಾ, ಕ್ಷಮಾ, ನಫೀಸಾ ಅಜ್ಮಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.