ADVERTISEMENT

ಕನ್ನಡ ವಿವಿ ಬೆಳ್ಳಿಹಬ್ಬ ವಿವಾದ: ಮಲ್ಲಿಕಾ ಘಂಟಿ ಹೀಗೆ ಹೇಳ್ತಾರೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಜನವರಿ 2019, 16:06 IST
Last Updated 28 ಜನವರಿ 2019, 16:06 IST
   

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ಸಮಾರೋಪಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರನ್ನು ಆಹ್ವಾನಿಸಿ, ನಂತರ ಕಾರ್ಯಕ್ರಮವನ್ನೇ ರದ್ದುಪಡಿಸಿದಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವರ ನಿರ್ಧಾರದ ಬಗ್ಗೆಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧದ ಚರ್ಚೆ ಗರಿಗೆದರಿದೆ. ಈ ಹಿನ್ನೆಲೆಯಲ್ಲಿ ಸೋಮವಾರ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಲ್ಲಿಕಾಘಂಟಿ ತಮ್ಮ ನಿರ್ಧಾರಕ್ಕೆ ಏನು ಕಾರಣ ಎಂಬುದನ್ನು ಬಹಿರಂಗಪಡಿಸಿದರು. ಅವರ ಮಾತುಗಳ ಅಕ್ಷರ ರೂಪ ಇಲ್ಲಿದೆ...

‘ನನಗೆ ಈ ಫೇಸ್‌ಬುಕ್– ವಾಟ್ಸ್‌ಆ್ಯಪ್ ನೋಡಿ ಬೇಸರಆಯ್ತು.ಅದಕ್ಕೆ ಕಾರ್ಯಕ್ರಮ ಕೈಬಿಟ್ಟೆ. ಏನೇ ಮಾಡಿದ್ರೂ ಒಳಗೆ ಒಂದು ಖುಷಿ ಬೇಕಲ್ಲ ಎಲ್ಲರಿಗೂ. ಅವರನ್ನು(ವಿಶ್ವೇಶರ ಭಟ್) ಕರೆಸಿ, ವೇದಿಕೆ ಮೇಲೆ ಕೂರಿಸಿ ಸಿದ್ದರಾಮಯ್ಯ ಎದುರಿಗೆಎಲ್ಲವನ್ನೂ ಹೇಳಬೇಕು ಅಂತ ಅಂದುಕೊಂಡಿದ್ದೆ. ಇವರಿಗೆ ನನ್ನ ಉದ್ದೇಶವೇ ಅರ್ಥವಾಗಲಿಲ್ಲ. ನಮ್ಮವರು 10 ಮಂದಿ ಬಂದ್ರೆ ಅವರವರು ಒಬ್ಬರು ಬೇಡ್ವಾ?99 ಮಂದಿ ನೀವೇ ಬಂದು ಹೋದ್ರಿ!

ADVERTISEMENT

‘ಇನ್ವಿಟೇಶನ್ ಮಾಡಿದ ಮೇಲೆ ಈ ಚರ್ಚೆ ಗಮನಿಸಿದೆ. ನನ್ನಿಂದ ವಿವಿ ವಾತಾವರಣ ಕೆಡುವುದು ಬೇಡ. ನನ್ನ ನಿರ್ಧಾರ ಸರಿಯೋ ತಪ್ಪೋ ಚರ್ಚೆಯೂ ಈಗ ಬೇಡ. ಈಗ ನೋಡಿ ಈ ಎಡಪಂಥೀಯರೇ ಪರಸ್ಪರ ಜಗಳ ಮಾಡಿಕೊಳ್ತಿದ್ದಾರೆ. ಇವರುಬಲಪಂಥೀಯರ ಜೊತೆಗೆ ಜಗಳ ಮಾಡೋದು ಬೇರೆ. ಆದರೆ ಇವರಲ್ಲೇ ಪರಸ್ಪರ ಸ್ನೇಹ ಕೆಡಿಸಿಕೊಳ್ತಿದ್ದಾರಲ್ಲಾ? ಇಂಥದ್ದುಆಗಬಾರದು ಅಂತ ಕಾರ್ಯಕ್ರಮವನ್ನು ಮುಂದೂಡಿದೆ. ಮುಂದೆ ಬಂದೋರು ಮಾಡಲಿ.

‘ನಾನು ಮುಂದಿನ ಆಗುಹೋಗುಗಳ ಬಗ್ಗೆ ಯೋಚನೆ ಮಾಡ್ತಾ ಇರ್ಲಿಲ್ಲ. ಬಂದದ್ದು ನಿಭಾಯಿಸಿದರೆ ಆಯ್ತು ಅನ್ನೋದು ನನ್ನ ಸ್ವಭಾವ.ಒಬ್ಬರು ಬಂದು ಪ್ರಶಾಂತ್ ಭೂಷಣ್‌ ಕರೆಸ್ತೀನಿ ಅಂದ್ರು. ಸರಿ ಅಂದ ಹೇಳಿದ್ದೆ.ಈಗ ಇವರನ್ನು ಕರೆಸೋಣ್ವಾ ಅಂದ್ರು. ಸರಿ ಅಂದೆ. ಆದರೆ ಅಷ್ಟಕ್ಕೇ ಈ ಹುಡುಗರುಕೆಂಬಾವುಟ ಹಿಡ್ಕೊಂಡು ನಿಂತ್ರು. ಇನ್ನೊಂದು ದಿವಸ ವಿಶ್ವವಿದ್ಯಾಲಯದಲ್ಲಿಮತ್ತೊಂದು ಪಂಥದವರುಯಾಕೆ ಕೇಸರಿ ಬಾವುಟ ಹಿಡಿಯಬಾರದು ಹೇಳಿ?

‘ಇಷ್ಟೆಲ್ಲಾ ಆದ್ರೂನಾನು ಇವರನ್ನು ಸಮರ್ಥಿಸಿಕೊಂಡೆ. ನನಗೆ ಅನ್ನಿಸುತ್ತೆನಮ್ಮವರು ಇದನ್ನು ಸಹಿಸಿಕೊಳ್ಳಬೇಕಿತ್ತು. ಇವರ ಮಂದಿ ಒಂಭತ್ತು ಮಂದಿ ಬಂದಾಗ ಅವರ ಪೈಕಿ ಒಬ್ಬರನ್ನಾದರೂ ಕರೆಸಲು ಅವಕಾಶ ಕೊಡಬೇಕಿತ್ತು.ನಾನು ನಾಳೆ ಅವರ ಎದುರು ಏನು ಮಾತಾಡ್ತಿದ್ದೆನೋಡಬೇಕಿತ್ತು. ನಾನು ಅವರನ್ನು ಹೊಗಳಿದ್ರೆ,ನೀವು (ವಿಶ್ವೇಶ್ವರ ಭಟ್ಟರು) ಮಾಡಿದ್ದು ಸರಿ ಅಂದಿದ್ರೆ ಬೇರೆ ಮಾತು. ಆದರೆ ನೀವು ಅದಕ್ಕೆ ಅವಕಾಶವೇ ಕೊಡಲಿಲ್ಲವಲ್ಲ. ಸಿದ್ದರಾಮಯ್ಯ ಅವರಿಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ.ಈ ಮಂದಿ ಅಲ್ಲೀತನಕ ಹೋಗಿಲ್ಲ,ಹೋಗೋದೂಇಲ್ಲ.

‘ಯೂನಿವರ್ಸಿಟಿಯಲ್ಲಿ ಎರಡೂ ಪಂಥದ ಹುಡುಗರು ಇದ್ದಾರೆ. ಪರಸ್ಪರ ಹುಡುಗರು ಎದುರುಬದುರು ನಿಲ್ಲಬಾರದು. ವಾತಾವರಣ ಹಾಳಾಗಬಾರದು ಅನ್ನೋದಷ್ಟೇ ನನ್ನ ಕಾಳಜಿ. ಹುಡುಗರು ನನ್ನ ಹತ್ತಿರಪದೇಪದೆ ನನಗೆ ಬಂದು ಯಾರಾದರೂ ದೊಡ್ಡವರು ಜರ್ನಲಿಸ್ಟ್ಬರಬೇಕು ಅಂತ ಕೇಳ್ತಿದ್ರು. ಭಟ್ಟರದು20–30 ಪುಸ್ತಕಗಳು ಬಂದಿವೆ. ಅದಕ್ಕೇ ನಾನೂ ಅವರನ್ನು ಕರೆಸಲು ಒಪ್ಪಿಕೊಂಡೆ. ಭಟ್ಟರಿಂದ ನನಗೇನೋ ಬಹಳ ದೊಡ್ಡ ಲಾಭ ಆಗಿದೆ ಅಂತ ಇವರು ಅಂತಾರೆ. ಆ ಮಾತು ಕೇಳಿದ್ರೆ ನಗುಬರುತ್ತೆ.

‘ನನ್ನನ್ನು ರಿಲೀವ್ ಮಾಡಿ ಅಂತ ಕೇಳೋಕೆ ಹತ್ತಿ ಒಂದು ತಿಂಗಳಾಯಿತು. ಇಷ್ಟು ವರ್ಷ ನನ್ನ ಅರ್ಥ ಮಾಡಿಕೊಂಡವರೇಹೀಗೆ ಮಾತಾಡಿದ್ರೆ ಬೇಜಾರಾಗುತ್ತೆ ನೋಡಿ. ಹೋದವರ ಬಗ್ಗೆ ಬೇಜಾರಿಲ್ಲ. ಜೊತೆಗಿದ್ದವರು, ನನ್ನನ್ನು ಅರ್ಥ ಮಾಡಿಕೊಂಡವರು ಈಗ ಹಿಂಗೆ ಮಾಡಿದ್ರಲ್ಲ ಅಂತ ಬೇಜಾರಾಗುತ್ತೆ. ಕವಿಗೋಷ್ಠಿ ರದ್ದು ಮಾಡಿದ್ದು ಯಾಕೆ ಅಂತ ಕೇಳ್ತಾರೆ.ಭಟ್ಟರನ್ನು ಬಿಟ್ಟು ಬೇರೆಯವರನ್ನು ಕರೆಸಿದ್ರೆ ಒಳಗಿರುವ ಅವರ ಹುಡುಗರು ಸುಮ್ಮನಿರ್ತಾರಾ? ಹೊರಗಿನಿಂದ ಅವರು ಬಂದರೆ ಏನು ಮಾಡೋದು ಹೇಳು? ನಮಗಿಂತ್ಲೂ ಸಂಖ್ಯೆಯಲ್ಲಿ ಅವರು ಹೆಚ್ಚಿದ್ದಾರೆ. ಸೌಹಾರ್ದತೆ ಇವರಿಗೆ ಅರ್ಥವಾಗಲಿಲ್ಲ. ಅದು (ಕಾರ್ಯಕ್ರಮದ ಬಗ್ಗೆ ನನ್ನ ಆಲೋಚನೆಯೇ) ಬೇರೆ ಇತ್ತು ಅದು. ಅದು ಏನೋ ಆಗ್ತಿತ್ತು'.

‘ಈಗ ಎಲ್ರೂಫೋನ್ ಮಾಡಕೆ ಹತ್ತಾರ. ಮುಂದೆ ಇಟ್ಟ ಹೆಜ್ಜೆ ಹಿಂದೆ ಯಾಕೆ ತೆಗದ್ರಿ. ನಾವೆಲ್ಲಾ ನಿಮ್ಮ ಬೆಂಬಲಕ್ಕಿದ್ವಿ ಅಂತಾರೆ. ಅದೇನು ದೊಡ್ಡ ಕ್ರಾಂತಿ ಅಂತ ನಾನು ಅಂದ್ಕೊಂಡು ಇರ್ಲಿಲ್ಲ. ನನಗೆ ಯಾವ ಪ್ರೆಸ್ಟೀಜ್ ಇಲ್ಲ. ಈ ಹುಡುಗರು ಮನಸ್ಸು ಕೆಡಿಸಿಕೊಳ್ಳಬಾರದು ಅನ್ನೋದಷ್ಟೇ ನನ್ನ ಕಾಳಜಿ.ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ್ದೀನಿ ಅಂತ ಹೇಳಿದ ಮೇಲೆ ಅಧ್ಯಾಪಕರು ಲೆಟರ್ ಕೊಟ್ಟಿದ್ದಾರೆ. ಕೆಲ ಪ್ರಾಧ್ಯಾಪಕರಿಗೆ ಪ್ರತಿಭಟನೆ ರೆಕಾರ್ಡ್ ಆಗಬೇಕು ಅಂತ ಇದೆ. ಇವರ ಕಥೆ ನೋಡಿ ಹೇಗಿದೆ ಅಂತ.ಹಿಂದೆ ಎಲ್ಲ ಕಾರ್ಯಕ್ರಮಗಳನ್ನು ಇವರಿಗೆ ಬಿಡ್ತಿದ್ದೆ. ಈಗಇದೊಂದು ಕಾರ್ಯಕ್ರಮ ಬೇಡ ಅಂತ ನೇರವಾಗಿ ಹೇಳಬಹುದಿತ್ತು. ಎಲ್ಲರೂ ಒಟ್ಟಿಗೆ ಬಂದಿದ್ರೆ ನಾನು ಬೇಡ ಅಂತ ಹೇಳ್ತಿದ್ನಾ? ವಿವಾದ ದಿಢೀರನೆ ಉದ್ಭವವಾಗಿದೆ.

‘ವಿಶ್ವೇಶ್ವರ ಭಟ್ಟರನ್ನು (ಕಾರ್ಯಕ್ರಮಕ್ಕೆ)ಹಾಕಿಕೊಂಡ ಮೇಲೆ ಕನಿಷ್ಠ 60–70 ಹುಡುಗರು ಫೋನ್ ಮಾಡಿದ್ರು. ಭಟ್ಟರು ಜೀವನದ ಹಾದಿ, ಬದುಕುವ ದಾರಿ ತೋರಿಸಿದ್ರು. ಕೆಲಸಕ್ಕೆ ಸೇರಿಸಿದ್ರು, ನಮಗಾಗಿ ಇಷ್ಟೆಲ್ಲಾ ಮಾಡಿದ್ರು. ಇಷ್ಟು ಪಗಾರದ ಕೆಲಸಕ್ಕೆ ಹಚ್ಚಿದ್ರು ಅಂತೆಲ್ಲಾ ಹೇಳ್ತಾರೆ'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.