ADVERTISEMENT

ಕಂಪ್ಲಿ: ಕೋಟೆ ಬಳಿಯ ಬಂಡೆಗಲ್ಲಿನ ಮೇಲೆ ಮೊಸಳೆ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:34 IST
Last Updated 15 ಜುಲೈ 2025, 7:34 IST
ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿ ಮಧ್ಯದ ಬಂಡೆಗಲ್ಲಿನ ಮೇಲೆ ಮೊಸಳೆ ಕಳೇಬರ ಸೋಮವಾರ ಕಂಡುಬಂದಿದೆ
ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿ ಮಧ್ಯದ ಬಂಡೆಗಲ್ಲಿನ ಮೇಲೆ ಮೊಸಳೆ ಕಳೇಬರ ಸೋಮವಾರ ಕಂಡುಬಂದಿದೆ   

ಕಂಪ್ಲಿ: ಕೋಟೆ ಬಳಿಯ ತುಂಗಭದ್ರಾ ನದಿ ಮಧ್ಯದ ಬಂಡೆಗಲ್ಲಿನ ಮೇಲೆ ಮೊಸಳೆ ಕಳೇಬರ ಸೋಮವಾರ ಕಂಡುಬಂದಿದೆ.

ನದಿ ಸೇತುವೆ ಮೇಲೆ ತೆರಳುತ್ತಿದ್ದ ದಾರಿಹೋಕರು, ಬಂಡೆ ಮೇಲೆ ಮಲಗಿದ್ದ ಮೊಸಳೆಯನ್ನು ಕುತೂಹಲದಿಂದ ನೋಡುತ್ತಿದ್ದರು. ಇದನ್ನು ಗಮನಿಸಿದ ಮೀನುಗಾರರು, ನದಿಯಲ್ಲಿ ಹತ್ತಿರಕ್ಕೆ ಹೋಗಿ ನೋಡಿದಾಗ ಮೊಸಳೆ ಸತ್ತಿರುವುದು ಗಮನಕ್ಕೆ ಬಂದಿದೆ.

ಬಂಡೆಗಲ್ಲಿನ ಮೇಲೆ ಮೊಸಳೆ ಬೋರಲು ಸ್ಥಿತಿಯಲ್ಲಿದ್ದು, ಅದರ ಬಾಲದ ತುದಿ ತುಂಡಾಗಿದೆ ಎಂದು ಮೀನುಗಾರರು ಮಾಹಿತಿ ನೀಡಿದರು. ಈ ಕುರಿತು ವನ್ಯಜೀವಿ ವಲಯದವರು ಅಥವಾ ಅರಣ್ಯ ಇಲಾಖೆಯವರು ಪರಿಶೀಲಿಸುವಂತೆ ಸ್ಥಳದಲ್ಲಿದ್ದ ನಾಗರಿಕರು ಮನವಿ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.