ADVERTISEMENT

‘ಇಂದಿರಾ ಕ್ಯಾಂಟೀನ್‌ಗೆ ವಾಲ್ಮೀಕಿ ಹೆಸರಿಡಬೇಡಿ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 13:35 IST
Last Updated 18 ಡಿಸೆಂಬರ್ 2019, 13:35 IST

ಹೊಸಪೇಟೆ: ‘ಇಂದಿರಾ ಕ್ಯಾಂಟೀನ್‌ಗಳಿಗೆ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂದು ನಾಮಕಾರಣ ಮಾಡುವುದು ಬೇಡ’ ಎಂದು ವಾಲ್ಮೀಕಿ ನಾಯಕ ಸಮುದಾಯದ ಯುವ ಮುಖಂಡ ದುರುಗಪ್ಪ ಪೂಜಾರಿ ಒತ್ತಾಯಿಸಿದ್ದಾರೆ.

‘ಕ್ಯಾಂಟೀನ್‌ಗಳಿಗೆ ಸರ್ಕಾರ ವಾಲ್ಮೀಕಿ ಅವರ ಹೆಸರಿಡಲಿದೆ ಎಂಬ ವಿಚಾರ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಆದರೆ, ಹೀಗೆ ಮಾಡುವುದು ಬೇಡ. ಮಹರ್ಷಿಗಳ ಬಗ್ಗೆ ಸರ್ಕಾರಕ್ಕೆ ಅಭಿಮಾನವಿದ್ದರೆ ಯಾವುದಾದರೂ ವಿಶ್ವವಿದ್ಯಾಲಯ ಅಥವಾ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡಬೇಕು. ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಸುವುದಿಲ್ಲ. ಆಗ ಯಾರಾದರೂ ಬೈದರೆ ಮಹರ್ಷಿಗಳಿಗೆ ಅಪಮಾನ ಮಾಡಿದಂತಾಗುತ್ತದೆ’ ಎಂದಿದ್ದಾರೆ.

‘ಶಿವಕುಮಾರ ಸ್ವಾಮೀಜಿ ಹೆಸರಿಡಿ’:

ADVERTISEMENT

‘ಇಂದಿರಾ ಕ್ಯಾಂಟೀನ್‌ಗೆ ತ್ರಿವಿಧ ದಾಸೋಹಿ, ಶತಾಯುಷಿ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರ ಹೆಸರಿಡುವುದು ಬಹಳ ಸೂಕ್ತವಾದುದು’ ಎಂದು ಸಾಮಾಜಿಕ ಹೋರಾಟಗಾರ ಕೆ.ಎಂ. ಸಂತೋಷ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

‘ಶಿವಕುಮಾರ ಸ್ವಾಮೀಜಿ ಅವರು ಬಡವರು, ನಿರ್ಗತಿಕರು ಸೇರಿದಂತೆ ಎಲ್ಲಾ ವರ್ಗದವರಿಗೆ ಅವರ ಮಠದಲ್ಲಿ ಆಶ್ರಯ ನೀಡಿ, ನಿತ್ಯ ಸಾವಿರಾರು ಜನರಿಗೆ ದಾಸೋಹ ಮಾಡಿ ಮನೆ ಮಾತಾಗಿದ್ದಾರೆ. ಅವರ ಹೆಸರು ಕ್ಯಾಂಟೀನ್‌ಗೆ ಇಟ್ಟರೆ ಬಹಳ ಸೂಕ್ತ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ ಮುಂದುವರೆಯಬೇಕು. ಯಾರದೋ ಒತ್ತಡಕ್ಕೆ ಒಳಗಾಗಿ ತಲೆಬಾಗಬಾರದು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.