ಸಂಡೂರು: ‘ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ಸಮಾಜದಲ್ಲಿನ ಜನರಿಗೆ ಶಾಂತಿ, ಅಧ್ಯಾತ್ಮ, ನೈತಿಕ, ಶಿಕ್ಷಣದ ಮಹತ್ವವನ್ನು ಸಾರುತ್ತಿದೆ’ ಎಂದು ಸಂಡೂರಿನ ಈಶ್ವರೀಯ ವಿಶ್ವವಿದ್ಯಾಲಯದ ಸಹ ಆಡಳಿತಾಧಿಕಾರಿ ಬ್ರಹ್ಮಾಕುಮಾರಿ ಸುದೇಶ್ ದೀದೀಜಿ ತಿಳಿಸಿದರು.
ಪಟ್ಟಣದಲ್ಲಿ ಯಶವಂತ ವಿಹಾರ್ ಮೈದಾನದಲ್ಲಿ ಮಂಗಳವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ವಿದ್ಯಾಲಯದ ನೂತನ ಶಿವ ಧ್ಯಾನ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪರಮಾತ್ಮನ ದೃಷ್ಟಿಯಲ್ಲಿ ಎಲ್ಲರೂ ಸರಿ ಸಮಾನರು. ಪ್ರಪಂಚದ 140 ದೇಶಗಳಲ್ಲಿ ನಮ್ಮ ಸಂಸ್ಥೆಯು ನಿರಂತರವಾಗಿ ಉತ್ತಮ ಸೇವಾ ಕಾರ್ಯ ಸಲ್ಲಿಸುತ್ತಿದೆ. 2025-26ನೇ ವರ್ಷದಲ್ಲಿ ಮೆಡಿಟೇಷನ್ ಫಾರ್ ಯೂನಿಟಿ ಅಂಡ್ ಟ್ರಸ್ಟ್ ಎಂಬ ಧ್ಯೇಯವನ್ನು ಹೊಂದಿದೆ’ಎಂದರು.
ಬ್ರಹ್ಮಾಕುಮಾರ ಬಸವರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ ಯವಹಿಸಿದ್ದರು.
ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ವೀಣಾಜಿ, ಜಿಂದಾಲ್ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರಾಲ್ಫ್ ಸುನಿಲ್, ಬಿ.ಕೆ. ನಿರ್ಮಲಾಜಿ, ಬಿ.ಕೆ. ಶಾಂತಕ್ಕ, ಬಿ.ಕೆ. ಚಂದ್ರಕಲಾಜಿ, ಬಿ.ಕೆ. ನಾಗವೇಣಿ, ಬಿ.ಕೆ. ಶೀಲಾಜಿ, ನಾಗರಾಜ ಗುಡೆಕೋಟೆ, ಚಿದಂಬರ ನಾನಾವಟೆ, ಬಿ.ಕೆ.ಕಮಲಾಕ್ಷಿ, ಬಿ.ಕೆ.ರಾಜೇಶ್ವರಿ, ಬಿ.ಕೆ.ಶಶಿಕಲಾ, ಬಿ.ಕೆ.ಲತಾ ಸೇರಿದಂತೆ ರಾಜ್ಯ, ಹೊರ ರಾಜ್ಯಗಳಲ್ಲಿನ ಈಶ್ವರೀಯ ವಿಶ್ವವಿದ್ಯಾಲಯದ ಹಲವು ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಜ್ಯೋತಿರ್ಲಿಂಗಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.