ಹೊಸಪೇಟೆ: ಹಂಪಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಕುಸ್ತಿ ಪಂದ್ಯಾವಳಿಗೆ ಶನಿವಾರ ತಾಲ್ಲೂಕಿನ ಹೊಸಮಲಪನಗುಡಿಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು.
ಆಂಜನೇಯ ಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪಂದ್ಯಾವಳಿಗೆ ಚಾಲನೆ ಕೊಟ್ಟರು.ಗದಗದ ಪ್ರಶಾಂತ್ ಗೌಡ ಹಾಗೂ ಬೆಳಗಾವಿಯ ರೋಹನ್ ಮಧ್ಯೆ ಮೊದಲ ಹಣಾಹಣಿ ನಡೆಯಿತು.
70 ಕೆ.ಜಿ ಗಿಂತ ಹೆಚ್ಚಿನ ತೂಕದ ಸ್ಪರ್ಧೆಯಲ್ಲಿ ಗೆದ್ದವರಿಗೆ 'ಹಂಪಿ ವೀರಕೇಸರಿ' ಬಿರುದು ಹಾಗೂ ₹ 40 ಸಾವಿರ ಬಹುಮಾನ ಇದೆ.
ಕುಸ್ತಿಗೂ ಮುನ್ನ ಎರಡು ನಿಮಿಷ ಮೌನಚರಿಸಿ ಇಹಲೋಕ ಅಗಲಿದ ಸಾಹಿತಿ ಚಿದಾನಂದಮೂರ್ತಿ ಅವರಿಗೆ ಗೌರವ ಸೂಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.