
ಪ್ರಜಾವಾಣಿ ವಾರ್ತೆಬಳ್ಳಾರಿ: ಬಳ್ಳಾರಿ ನಗರ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ)ಯಾಗಿ ಯಶ್ ಕುಮಾರ್ ಶರ್ಮ ಅವರನ್ನು ಸರ್ಕಾರ ಮಂಗಳವಾರ ನಿಯೋಜಿಸಿದೆ.
ಯಶ್ ಕುಮಾರ್ ಶರ್ಮ ಸದ್ಯ ತುಮಕೂರು ಜಿಲ್ಲೆಯಲ್ಲಿ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬಳ್ಳಾರಿಯ ನಗರ ಉಪ ವಿಭಾಗದ ಡಿಎಸ್‌ಪಿಯಾಗಿ ಚಂದ್ರಕಾಂತ ನಂದಾ ರೆಡ್ಡಿ ಈ ವರೆಗೆ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಜಾಗಕ್ಕೆ ಯಶ್ ಕುಮಾರ್ ಶರ್ಮಾ ಅವರನ್ನು ಕಳುಹಿಸಲಾಗಿದೆ. ಆದರೆ, ನಂದಾರೆಡ್ಡಿ ಅವರಿಗೆ ಯಾವುದೇ ಜಾಗ ತೋರಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.