ADVERTISEMENT

ಆನೇಕಲ್‌: 100 ಕುಡಿಯುವ ನೀರಿನ ಘಟಕ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:23 IST
Last Updated 16 ಸೆಪ್ಟೆಂಬರ್ 2013, 9:23 IST

ಆನೇಕಲ್:  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ 100 ಘಟಕಗಳನ್ನು ಸ್ಥಾಪಿಸಿ ಕೇವಲ 1ರೂಗೆ ಹತ್ತು ಲೀಟರ್‌ ನೀರನ್ನು ನೀಡಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ಅವರು ತಾಲ್ಲೂಕಿ ಜಿಗಣಿಯಲ್ಲಿ ಬ್ಲಾಲಕ್ ಕಾಂಗ್ರೆಸ್ ವತಿಯಿಂದ ಏರ್ಪಡಿ ಸಲಾಗಿದ್ದ ಮತದಾರರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲೊ್ಗಂಡು ಮಾತನಾಡಿದರು.

ಪ್ರತಿಯೊಬ್ಬರಿಗೂ ಶುದ್ಧ ಕುಡಿ ಯುವ ನೀರು ದೊರೆಯುವಂತಾ ಗಬೇಕು. ಇದಕ್ಕಾಗಿ ಕ್ಷೇತ್ರದ ಎಂಟು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆ, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಶಾಸಕರು ಹಾಗೂ ಕಾರ್ಯಕರ್ತರ ಸಹಕಾರದಿಂದ ಶ್ರಮಿಸಲಾಗುವುದು ಎಂದರು.

ಕ್ಷೇತ್ರದ ಜನತೆ ವಿಶ್ವಾಸದಿಂದ ಅತ್ಯಧಿಕ ಮತಗಳನ್ನು ನೀಡಿ ಗೆಲುವಿಗೆ ಕಾರಣರಾದ್ದಾರೆ. ಅವರ ಸೇವಕನಂತೆ ಕಾರ್ಯನಿರ್ವಹಿಸಿ ಕ್ಷೇತ್ರದ ಋಣ ತೀರಿಸುತ್ತೇನೆ ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ,  ‘ಕ್ಷೇತ್ರದಲ್ಲಿ 20 ವರ್ಷಗಳಿಂದ ಕಾಂಗೆ್ರಸ್‌ ಶಾಸಕರು ಇರಲಿಲ್ಲ, ಈ ಕೊರತೆಯನು್ನ ನಿವಾರಿಸಿ ಜನತೆ ಹೆಚ್ಚಿನ ಬಹುಮತದಿಂದ ಪಕಾಂಗೆ್ರಸ್‌ ಶಾಸಕರು ಹಾಗೂ ಸಂಸ ದರನು್ನ ಆಯೆ್ಕಮಾಡಿದಾ್ದರೆ. ಶೀಘ್ರದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಸಹ ಕಾಂಗೆ್ರಸ್‌ಗೆ ಬೆಂಬಲ ನೀಡಿ ಗೆಲ್ಲಿಸಬೇಕು ಎಂದರು.

ಶಾಸಕ ಡಿ.ಕೆ.ಶಿವಕುಮಾರ್ ಮಾತ ನಾಡಿ, ‘ಯಾರೇ ಬಂದರೂ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಚುಕಾ್ಕಣಿ ಹಿಡಿಯುವುದಿಲ್ಲ. ಮುಂದಿನ ಸಾರ್ವ ತ್ರಿಕ ಚುನಾವಣೆಯಲ್ಲಿಯೂ ಯುಪಿಎ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದು ಭವಿಷ್ಯ ನುಡಿದರು.

ಶಾಸಕರಾದ ಬಿ.ಶಿವಣ್ಣ, ಎಸ್‌.ಟಿ. ಸೋಮಶೇಖರ್‌, ಕೆ.ಮುನಿರತ್ನಂ, ವಿಧಾನ ಪರಿಷತ್‌ ಸದಸ್ಯ ಬಿ.ಟಿ.ದಯಾ ನಂದರೆಡ್ಡಿ, ಜಿಪಂ ಸದಸ್ಯರಾದ ಕೆ.ಸಿ.ರಾಮಚಂದ್ರ, ಪ್ರಭಾಕರರೆಡ್ಡಿ,  ಬಾ್ಲಕ್‌ ಕಾಂಗೆ್ರಸ್‌ ಅಧ್ಯಕ್ಷ ಎಚ್‌.ಪಿ. ತಿಮಾ್ಮರೆಡ್ಡಿ, ರಾಜಣ್ಣ, ಚಂದ್ರಪ್ಪ, ಮಾಜಿ ಅಧ್ಯಕ್ಷ ಎನ್‌.ಬಿ.ಐ. ನಾಗರಾಜು, ಬಮೂಲ್‌ ನಿರ್ದೇಶಕ ಆರ್‌.ಕೆ .ರಮೇಶ್‌,  ಹಾಪ್‌ಕಾಮ್ಸ್ ನಿರ್ದೇಶಕ ಎಂ.ಬಾಬು, ಜಿಪಂ ಮಾಜಿ ಅಧ್ಯಕ್ಷ  ಎಚ್‌.ಎಸ್‌.ಬಸವರಾಜು, ಮುಖಂಡ ರಾದ ಇಂಡ್ಲವಾಡಿ ನಾಗರಾಜ್‌, ಜಿಗಣಿ ಕೃಷ್ಣಪ್ಪ, ಹಾವೇ ವೆಂಕಟೇಶ್‌, ರಾಮೋಜಿಗೌಡ, ಸುಷ್ಮಾ ರಾಜ ಗೋಪಾಲರೆಡ್ಡಿ, ಸಿ.ಕೆ.ಚಿನ್ನಪ್ಪ, ಕೆ.ಎಸ್‌.ನಟರಾಜ್‌, ಅಚ್ಚುತರಾಜು, ನರೇಂದ್ರಕುಮಾರ್‌, ಪುನೀತ್‌, ಜೆ.ಟಿ. ವೆಂಕಟೇಶ್‌, ಜಿಗಣಿ ಮುನಿಯಪ್ಪ, ಸಂಪಂಗಿಸಾ್ವಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.