ADVERTISEMENT

ಉಪವಿಭಾಗಾಧಿಕಾರಿ ಕಚೇರಿ ಶೀಘ್ರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 9:07 IST
Last Updated 10 ಜನವರಿ 2014, 9:07 IST

ದೊಡ್ಡಬಳ್ಳಾಪುರ: ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪವಿಭಾ ಗಾಧಿಕಾರಿಗಳ ಕಚೇರಿಯನ್ನು ದೊಡ್ಡ ಬಳ್ಳಾಪುರ ನಗರಕ್ಕೆ ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ಶುಕ್ರ ವಾರ (ಜನವರಿ 10) ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ವಿ.ಶಂಕರ್‌ ಭೇಟಿ ನೀಡಲಿದ್ದಾರೆ. ಶೀಘ್ರದಲ್ಲಿಯೇ ಉಪವಿಭಾಗಾಧಿಕಾರಿಗಳ ಕಚೇರಿ ನಗರ ಕ್ಕೆ ಸ್ಥಳಾಂತರ ಆಗಲಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ‘ದೊಡ್ಡಬಳ್ಳಾಪುರ ಉಪವಿಭಾಗಾಧಿಕಾ ರಿಗಳ ಕಚೇರಿ ನಗರಕ್ಕೆ ಸ್ಥಳಾಂತರ ಆಗ ಬೇಕು ಎನ್ನುವುದು ಬಹುದಿನಗಳಬೇಡಿಕೆ.  ಇಡೀ ರಾಜ್ಯದಲ್ಲಿಯೇ ಉಪವಿಭಾ ಗಾಧಿಕಾರಿಗಳ ಕಚೇರಿ ಬೇರೆಡೆ ಕೆಲಸ ನಿರ್ವಹಿಸುತ್ತಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾತ್ರ. ಹೀಗಾಗಿ ಉಪವಿಭಾಗಾಧಿ ಕಾರಿಗಳ ಕಚೇರಿ ನಗರಕ್ಕೆ ಸ್ಥಳಾಂತರ ಆಗುವುದು ವೈಜ್ಞಾನಿಕವಾಗಿದೆ’ ಎಂದು ತಿಳಿಸಿದ್ದಾರೆ.

10 ಸಾವಿರಕ್ಕೆ ಮುಟ್ಟಿದ  ಪತ್ರ ಚಳುವಳಿ:
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸು ತ್ತಿರುವ ದೊಡ್ಡಬಳ್ಳಾಪುರ ಉಪ ವಿಭಾ ಗಾಧಿಕಾರಿಗಳ ಕಚೇರಿ ನಗರಕ್ಕೆ ಸ್ಥಳಾಂತ ರ ಆಗಬೇಕು ಎಂದು ಆಗ್ರಹಿಸಿ ರಾಜ್ಯ ಪಾಲರು, ಮುಖ್ಯಮಂತ್ರಿಗಳು,ಕಂದಾಯ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿ ಗಳಿಗೆ ಸಾರ್ವಜನಿಕರಿಂದ ಅಂಚೆ ಮೂಲಕ ಪತ್ರ ಬರೆಸುವ ಚಳವಳಿ ಆರಂಭಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) 10 ಸಾವಿರ ಪತ್ರಗಳನ್ನು ಬರೆಸಿ ಅಂಚೆ ಮೂಲಕ ಕಳುಹಿಸಿದೆ ಎಂದು ವೇದಿಕೆಯ ರಾಜ್ಯ ಉಪಾಧ್ಯಕ್ಷ ಬಿ.ಎಸ್‌.ಚಂದ್ರ ಶೇಖರ್‌ ತಿಳಿಸಿದ್ದಾರೆ.

ಅವರು ಈ ಬಗ್ಗೆ ಮಾಹಿತಿ ನೀಡಿ, ಒಂದು ವಾರದ ಹಿಂದೆ ತಹಶಿೀಲ್ದಾರರ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿ ಗಳು, ಕಂದಾಯ ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸ ಲಾಗಿದೆ. ಉಪ ವಿಭಾಗಾಧಿಕಾರಿಗಳ ಕಚೇರಿ ಬೆಂಗಳೂರಿನಿಂದ ದೊಡ್ಡಬಳ್ಳಾ ಪುರಕ್ಕೆ ಸ್ಥಳಾಂತರ ಆಗದ ಹೊರತು ಗಣರಾಜ್ಯೋತ್ಸವದ ದಿನ ಉಪವಿಭಾ ಗಾಧಿಕಾರಿಗಳು ಧ್ವಜಾರೋಹಣ ಮಾಡ ಬಾರದು.

ತಹಶಿೀಲ್ದಾರ್‌ ಅಥವಾ ಶಾಸಕರು ಧ್ವಜಾರೋಹ ನೆರವೇರಿಸ ಬೇಕು. ಈ ಬಗ್ಗೆ ಈಗಾಗಲೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಜಿಲ್ಲಾ ಧಿಕಾರಿಗಳ ಹಾಗೂ ಶಾಸಕರ ಅಧ್ಯಕ್ಷತೆ ಯಲ್ಲಿ ಈ ಹಿಂದೆ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇವೆ. ಕಚೇರಿ ಸ್ಥಳಾಂತರ ಕುರಿತು ಲಿಖಿತ ಭರವಸೆ ದೊರೆಯದೆ ಹೊರತು ಉಪವಿಭಾಗಾ ಧಿಕಾರಿಗಳು ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸುವುದು ಸರಿ ಯಲ್ಲ. ಲಿಖಿತ ಭರವಸೆ ದೊರೆಯದಿ ದ್ದರೆ ತಾಲ್ಲೂಕು ಕಚೇರಿ ಮುಂದೆ ಶಾಂತಿಯುವಾಗಿ ಧರಣಿಯನ್ನು ಆರಂಭಿಸ ಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.