ADVERTISEMENT

ಕೊಂಗಾಡಿಯಪ್ಪ ಎಲ್ಲರಿಗೂ ಆದರ್ಶ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ದೊಡ್ಡಬಳ್ಳಾಪುರ: ಯಾವುದೇ ಹಣ ಬಲವಿಲ್ಲದೇ ಸಾಮಾನ್ಯ ಶಿಕ್ಷಕರಾಗಿ ಊರಿಗೆ, ನೀರು, ವಿದ್ಯುತ್, ಮೂಲ ಸೌಕರ್ಯಗಳನ್ನು ತರಲು ಶ್ರಮಿಸಿದ ದಿವಂಗತ ಕೊಂಗಾಡಿಯಪ್ಪನವರು ಎಲ್ಲರಿಗೂ ಆದರ್ಶವಾಗಬೇಕಿದೆ ಎಂದು ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಶಂಕರಯ್ಯ ಹೇಳಿದರು.

ನಗರದ ಕೊಂಗಾಡಿಯಪ್ಪ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ಕೊಂಗಾಡಿಯಪ್ಪನವರ 152ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರನ್ನು ಸ್ಮರಿಸುವ ರೀತಿಯಲ್ಲೇ ನಮ್ಮ ಊರು ಪ್ರಾದೇಶಿಕ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರನ್ನೂ ನಾವು ಸ್ಮರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಂಗಾಡಿಯಪ್ಪ ವಿದ್ಯಾಸಂಸ್ಥೆ ಉಪಾಧ್ಯಕ್ಷ ಬಿ.ಎನ್.ತಿಮ್ಮಣ್ಣ, ಗೌರವ ಕಾರ್ಯದರ್ಶಿ ಎ.ಜಿ.ಶ್ರೀನಿವಾಸ ಮೂರ್ತಿ, ಖಜಾಂಚಿ ಡಿ.ಪ್ರಭುದೇವಯ್ಯ, ಪ್ರಾಂಶುಪಾಲ ಪ್ರೊ.ಎಸ್.ವಿ.ಸುಬ್ರಹ್ಮಣ್ಯ, ಮೇಜರ್ ಎಸ್.ಮಹಾಬಲೇಶ್ವರ್, ಉಪಪ್ರಾಂಶಲರಾದ ಎಸ್.ರಾಜಲಕ್ಷ್ಮೀ ಮತ್ತಿತರರು ಹಾಜರಿದ್ದರು.

ನಗರಸಭೆಯಿಂದ ಕೊಂಗಾಡಿಯಪ್ಪ ಸ್ಮರಣೆ: ಎಲ್ಲರೂ ಸಾಕ್ಷರರಾದಾಗ ಮಾತ್ರವೇ ನಾಡಿನ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತು ಆ ದಿಸೆಯಲ್ಲಿ ಶ್ರಮಿಸಿದವರು ಡಿ.ಕೊಂಗಾಡಿಯಪ್ಪ ಎಂದು ಲೇಖಕ ಡಾ.ಎ.ಓ.ಆವಲಮೂರ್ತಿ ಶ್ಲಾಘಿಸಿದರು.

ಸಂಜಯನಗರದ ಕೊಂಗಾಡಿಯಪ್ಪ ಸಮಾಧಿ ಸಮೀಪ ನಡೆದ ಕೊಂಗಾಡಿಯಪ್ಪನವರ 152ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕೊಂಗಾಡಿಯಪ್ಪ ಅವರ ಹೆಸರನ್ನು ಊರಿನ ಪ್ರಮುಖ ರಸ್ತೆ ಹಾಗೂ ಸ್ಥಳಗಳಿಗೆ ಹೆಸರಿಟ್ಟು ಸ್ಮರಿಸುವ ಜೊತೆಗೆ ಅವರ ಜನ್ಮ ದಿನಾಚರಣೆ ಆಚರಿಸುವ ಮೂಲಕ ಸೇವಾ ಕಾರ್ಯಗಳನ್ನು ಸ್ಮರಿಸುವುದು ಊರಿನ ಪ್ರತಿ ಪ್ರಜೆಯ ಕರ್ತವ್ಯ.

ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ಕೊಂಗಾಡಿಯಪ್ಪನವರ ಸೇವಾಕಾರ್ಯ, ಚಿಂತನೆಗಳು ಇಂದಿನ ವಿದ್ಯಾರ್ಥಿಗಳ ಶಿಕ್ಷಣ, ಭವಿಷ್ಯಕ್ಕೆ ಸ್ಫೂರ್ತಿಯಾಗಬೇಕು ಎಂದರು.

ನಗರಸಭೆ ಅದ್ಯಕ್ಷ ಜಗದೀಶ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಪೌರಾಯುಕ್ತ ಚಿಕ್ಕಣ್ಣ, ಮಾಜಿ ನಗರಸಭಾಧ್ಯಕ್ಷ ಜೆ.ರಾಜೇಂದ್ರ, ಕೆ.ಪಿ.ಜಗನ್ನಾಥ್, ಮಾಜಿ ಪುರಸಭಾ ಸದಸ್ಯ ರುಮಾಲೆ ನಾಗರಾಜ್, ಕೊಂಗಾಡಿಯಪ್ಪ ಕುಟುಂಬದ ವಿಶ್ವನಾಥ್, ಹಿರಿಯ ಪತ್ರಕರ್ತ ಪಿ.ಜಿ.ಸುಬ್ಬರಾವ್, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಸಂಚಾಲಕ ಡಿ.ಆರ್.ನಟರಾಜ್, ನಗರಸಭಾ ಸದಸ್ಯರಾದ ಟಿ.ಎನ್.ಪ್ರಭುದೇವ್, ಬಿ.ಜಿ.ಹೇಮಂತ ರಾಜು, ಜಯಮ್ಮ, ಮಂಜುಳಾ, ವಡ್ಡರಹಳ್ಳಿ ರವಿ, ಕೆ.ಬಿ.ಹನುಮಂತರಾಯಪ್ಪ, ರಾಜಮ್ಮ, ಅನಸೂಯಮ್ಮ, ಚಂದ್ರಶೇಖರ್ ಮುಂತಾದವರು ಹಾಜರಿದ್ದರು.

ಭಜನೆ: ಕೊಂಗಾಡಿಯಪ್ಪ ಜನ್ಮದಿನಾಚರಣೆ ಸಮಿತಿ ನೇತೃತ್ವದಲ್ಲಿ  ಡಿ.ಕೊಂಗಾಡಿಯಪ್ಪನವರ ಸಮಾಧಿ ಬಳಿ ದತ್ತಾತ್ರೇಯ ಬ್ರಹ್ಮವಿದ್ಯಾ ಸೇವಾ ಶ್ರಮದವರಿಂದ ಭಜನೆ ನಡೆಯಿತು.  ಇದೇ ವೇಳೆ ಸಮಾಧಿ ಬಳಿ ಕೊಂಗಾಡಿಯಪ್ಪನವರ ಶೈಕ್ಷಣಿಕ ಸಾಧನೆ, ಸ್ಮರಣೆ ಕುರಿತ ಫಲಕವನ್ನುಶಾಸಕ ಜೆ.ನರಸಿಂಹಸ್ವಾಮಿ ಅನಾವರಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.