ADVERTISEMENT

ದೇಶ ಕಂಡ ಮಹಾನ್ ವ್ಯಕ್ತಿ ಅಂಬೇಡ್ಕರ್

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 19:30 IST
Last Updated 14 ಏಪ್ರಿಲ್ 2011, 19:30 IST
ದೇಶ ಕಂಡ ಮಹಾನ್ ವ್ಯಕ್ತಿ ಅಂಬೇಡ್ಕರ್
ದೇಶ ಕಂಡ ಮಹಾನ್ ವ್ಯಕ್ತಿ ಅಂಬೇಡ್ಕರ್   

ಮಾಗಡಿ: ಅಂಬೇಡ್ಕರ್‌ರವರು ಈ ದೇಶ ಕಂಡ ಮಹಾನ್ ವ್ಯಕ್ತಿ.  ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಉಪನ್ಯಾಸಕ ಕುಮಾರ್ ನುಡಿದರು.
ಅವರು ಪಟ್ಟಣದ ಹೊಸಪೇಟೆ ಮೇದರ ಬೀದಿಯ ಜೈಭೀಮ್ ಕನ್ನಡ ಯುವಕರ ಸಂಘದ ವತಿಯಿಂದ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿಯನ್ನು ವಿನೋದ್‌ಕುಮಾರ್ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್‌ರವರು ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಮುಂದೆ ಯಾರು ಅನುಭವಿಸಬಾರದು ಎಂದು ಪಣತೊಟ್ಟು ಅಸಮಾನತೆ ನಿವಾರಣೆಗೆ ಅವಿರತವಾಗಿ ಶ್ರಮಿಸಿದರು ಎಂದು ನಾಗರಾಜು ತಿಳಿಸಿದರು. ಶೋಷಿತರೆಲ್ಲರೂ ಒಗ್ಗೂಡಿ ಅಕ್ಷರದ ಅರಿವು ಮೂಡಿಸಿಕೊಳ್ಳಲು ಮುಂದಾಗಬೇಕಿದೆ ಎಂಬುದು ಅಂಬೇಡ್ಕರ್‌ರವರ ಆದರ್ಶವಾಗಿದೆ ಎಂದು ಶಿಕ್ಷಕ ಮಾರಣ್ಣ ತಿಳಿಸಿದರು. ವಿಶ್ವ ಕಂಡ ಶ್ರೇಷ್ಠ ಸುಧಾರಕರಲ್ಲಿ ಅಂಬೇಡ್ಕರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.  ಅವರು ರಚಿಸಿದ ಸಂವಿಧಾನ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಿದೆ ಎಂದು ತಿರುಮಲೆ ಶ್ರೀನಿವಾಸ್ ತಿಳಿಸಿದರು. 

ವಿನೋದ್ ಕುಮಾರ್, ದೇವರಾಜು, ಸಿದ್ದರಾಜು, ಜಯಸಿಂಹ, ಶಿವರಾಜು, ಸಂತೋಷ್‌ಕುಮಾರ್, ಪ್ರಕಾಶ್, ಸತೀಶ್ ಮಾತನಾಡಿದರು.  ಮಾದೇಶ, ರಂಗಸ್ವಾಮಿ, ಎಚ್.ಆರ್ ರಮೇಶ್, ರಂಗನಾಥ್, ಚಂದ್ರು, ಪುರುಷೋತ್ತಮ, ಗುರುಮೂರ್ತಿ, ಶ್ರೀಧರ್, ಪ್ರಕಾಶ್, ಅಣ್ಣಯ್ಯ, ಲಕ್ಷ್ಮಿನಾರಾಯಣ್, ಶಿವು, ಭೈರೇದೇವರು, ಬಾಲಾಜಿ ಇತರರು ಉಪಸ್ಥಿತರಿದ್ದರು. ಅನ್ನದಾನ ಏರ್ಪಡಿಸಲಾಗಿತ್ತು. ಚಿಕ್ಕನರಸಿಂಹಯ್ಯ ಸ್ವಾಗತಿಸಿ, ಗೋಪಾಲ್ ವಂದಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.