ADVERTISEMENT

ಪಿಎಸ್‌ಐ ಮೇಲೆ ಹಲ್ಲೆ: 16 ಮಂದಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಚನ್ನಪಟ್ಟಣ:ನಗರದ ಪೂರ್ವ ಠಾಣೆ ಎಸ್‌ಐ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ 16 ಮಂದಿಗೆ ರಾಮನಗರ ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು ಶನಿವಾರ ಜಾಮೀನು ನೀಡಿದೆ.

ಶನಿವಾರ ನ್ಯಾಯಾಲಯಕ್ಕೆ ಹಾಜರಾದ 16ಮಂದಿಯಲ್ಲಿ 14ಮಂದಿಗೆ ಜಾಮೀನು, ಮತ್ತಿಬ್ಬರಿಗೆ ನಿರೀಕ್ಷಣಾ ಜಾಮೀನನ್ನು ನ್ಯಾಯಾಧೀಶ ರುದ್ರಮುನಿ ನೀಡಿದರು. ಆರೋಪಿಗಳ ಪರವಾಗಿ ಹಿರಿಯ ವಕೀಲ ಆರ್.ಎಸ್. ಕೃಷ್ಣ ವಾದ ಮಂಡಿಸಿದರು.

ಘಟನೆ ವಿವರ: ಇದೇ ತಿಂಗಳ 3ರಂದು ಪಟ್ಟಣದ ಶೇರ್ವಾ ಹೊಟೇಲ್‌ಬಳಿ ರಾತ್ರಿ ಅವಧಿ ಮೀರಿ ವ್ಯಾಪಾರ ನಡೆಸುತ್ತಿದ್ದ ಮಾಲೀಕರಿಗೆ, ಅಂಗಡಿ ಮುಚ್ಚುವಂತೆ ಸೂಚಿಸಿದ ಎಎಸ್‌ಐ ಪ್ರಕಾಶ್ ಮೇಲೆ ಗುಂಪೊಂದು ಹಲ್ಲೆ ಮಾಡಿತ್ತು. ಘಟನೆ ಸಂಬಂಧ 16ಮಂದಿಯನ್ನು ಬಂಧಿಸಲಾಗಿತ್ತು.

ಪೊಲೀಸರು ಹುಸೇನ್‌ಖಾನ್, ಸೈಯದ್ ಫಾರುಕ್, ಖಲಿಲ್, ಸಮೀರ್, ಶಹಬುದ್ಧೀನ್, ಶಬಿರ್ ಅಲಿ, ಕೈಸರ್, ಸದ್‌ಮ್‌ಹುಸೇನ್, ಜಮೀರ್, ಹುಸ್‌ಖಾನ್ ಸಾಹೆಬ್, ಸೈಯದ್ ಜಲಾಲುದ್ಧೀನ್, ಪೀರ್ ಮಹಿದ್, ಫಾರುಕ್ ಮುಂತಾದವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು ಇವರನ್ನು 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.