ADVERTISEMENT

ಪ್ರತಿಷೆIJ ಪಣವಾಗಿಟı ಪಕ್ಷಗಳು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 10:54 IST
Last Updated 10 ಫೆಬ್ರುವರಿ 2016, 10:54 IST
ಪ್ರತಿಷೆIJ ಪಣವಾಗಿಟı ಪಕ್ಷಗಳು
ಪ್ರತಿಷೆIJ ಪಣವಾಗಿಟı ಪಕ್ಷಗಳು   

ದೇವನಹಳ್ಲಿ : ಇದೇ 13ರಂದು ನಡೆಯಲಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ವಿವಿಧ ಪಕ್ಷದ ಅಭ್ಯರ್ಥಿಗಳು ಬಿರುಬಿಸಿನಲ್ಲಿಯೂ ಮತಯಾಚನೆ ಮಾಡುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ .

ತಾಲ್ಲೂಕಿನ ನಾಲ್ಕು ಜಿಲ್ಲಾ ಪಂಚಾಯಿತಿ ಹಾಗೂ ಹದಿನೈದು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಜೆ.ಡಿ.ಎಸ್, ಕಾಂಗ್ರೆಸ್ ಮತ್ತು ಬಿ.ಜೆ.ಪಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರತಿಷ್ಠೆಯನ್ನು ಪಣಕ್ಕಿಟ್ಟಿವೆ. ಬಿಜ್ವವಾರ ಎಸ್ಸಿ ಮಿಸಲು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅನಂತಕುಮಾರಿ ಜೆ.ಡಿ.ಎಸ್ ಪಕ್ಷದಿಂದ ಗಂಗಾಂಬಿಕೆ ಮತ್ತು ಬಿ.ಜೆ.ಪಿ ಯಿಂದ ಸರಸ್ವತಿ ನಾಗೇಶ್ ಬಿರುಸಿನ ಮತಯಾಚನೆ ನಡೆಸುತ್ತಿದ್ದಾರೆ .

ವಿಶೇಷವೆಂದರೆ ಈ ಮೂವರು ಅಭ್ಯರ್ಥಿಗಳು ಸ್ಥಳಿಯರಲ್ಲ ಅಲ್ಲದೇ ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ವಾಸವಿದ್ದು ಇತ್ತೀಚೆಗಷ್ಟೆ ಪುರಸಭೆಯಿಂದ ಹೊರ ಬಂದು ವಾಸದ ಧೃಢೀಕರಣ ಮತ್ತು ಚುನಾವಣಾ ಗುರುತಿನ ಚೀಟಿ ಹೊಂದಿದ್ದಾರೆ ಇದರಿಂದ ಹೊರಗಿನವರಿಗೆ ಬೆಂಬಲಿಸಿ ಪಕ್ಷದ ನಿಷ್ಠೆ ತೋರಿಸುವುದು ಮುಖಂಡರಿಗೆ ಅನಿರ್ವಾಯವಾಗಿದೆ. ಅದರೆ ಈ ಮೂವರು ಅಭ್ಯರ್ಥಿಗಳ ಸಮುದಾಯದ ಮತದಾರರ ಸಂಖ್ಯೆ ಕಡಿಮೆ ಇದೆ, ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷದಿಂದ ಬಹುಸಂಖ್ಯಾತ ಮತದಾರರನ್ನು ಹೊಂದಿರುವ ಎಡ ಮತ್ತು ಬಲ ಸಮುದಾಯಕ್ಕೆ ಪ್ರಮುಖ ಪಕ್ಷಗಳು ಮಣೆಹಾಕಿಲ್ಲ ಇದು ಚುನಾವಣೆಯಲ್ಲಿ ಯಾವರೀತಿ ಕೆಲಸಮಾಡಲಿದೆ ಎನ್ನುವುದು ಯಕ್ಷಪ್ರಶ್ನೆ

ಕುಂದಾಣ ಜಿ.ಪಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎಸಿ. ಮಂಜುನಾಥ್, ಜೆ.ಡಿ.ಎಸ್ ಅಭ್ಯರ್ಥಿಯಾಗಿ ಶ್ರೀರಾಮಯ್ಯ, ಬಿ.ಜೆ.ಪಿ ಯಿಂದ ಸೊಣ್ಣೇಗೌಡ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ ಅಲ್ಲದೆ ಸ್ಥಳಿಯ ಕ್ಷೇತ್ರದವರಾಗಿದ್ದಾರೆ, ಈ ಹಿಂದೆ ಈ ಕ್ಷೇತ್ರ ಕಾಂಗ್ರೆಸ್ ವಶವಾಗಿತ್ತು ಪ್ರಸ್ತುತ ಸ್ಥಳಿಯ ಶಾಸಕ ಪಿಳ್ಳಮುನಿಶಾಮಪ್ಪ ಮಾಜಿ ಶಾಸಕ ಕಾಂಗ್ರೆಸ್‌ನ ವೆಂಕಟಸ್ವಾಮಿ ಸ್ವಕ್ಷೇತ್ರವಾಗಿರುವುದರಿಂದ ಹೆಚ್ಚು ಗಮನ ಸೆಳೆದಿದ್ದು ಪ್ರಚಾರದ ಭರಾಟೆ ಹಗಲಿರಳು ನಡೆಯುತ್ತಿದೆ ಕಾಲಿಗೆ ಚಕ್ರ ಕಟ್ಟಿ ಕಾರ್ಯಕರ್ತರು  ಮತಯಾಚನೆಯಲ್ಲಿ ತೊಡಗಿಸಿ ಕೊಂಡಿದ್ದಾರೆ .

ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅವತಿ ಜಿ.ಪಂ ಕ್ಷೇತ್ರ ಜೆ.ಡಿ.ಎಸ್ ತೆಕ್ಕೆಗೆ ಬಂದಿತ್ತು, ಆಯ್ಕೆಯಾದ ಜಿ.ಪಂ ಸದಸ್ಯ ಬೀರಪ್ಪ ಈವರೆಗೂ ಪ್ರಚಾರಕ್ಕೆ ಬಂದಿಲ್ಲದಿರುವುದು  ಸ್ಥಳಿಯ ಕಾರ್ಯಕರ್ತರಿಗೆ ತಲೆ ನೋವಾಗಿದೆ, ಯಾವುದೇ ಪಕ್ಷವನ್ನು ಬಹಿರಂಗವಾಗಿ ಬೆಂಬಲಿದೇ ತಟಸ್ಥ ಧೊರಣೆ ಅನುಸರಿಸಿರುವುದು ನಿಗೂಢ ನಡೆಯಾದರೂ ಪ್ರಸ್ತುತ ಜಿ.ಪಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಧಮ್ಮ ಮುನಿರಾಜು,  ಬಿ.ಜೆ.ಪಿ ಯಿಂದ ಮುನಿರತ್ನಮ್ಮ, ಸ್ಥಳಿಯ ಕ್ಷೇತ್ರದ ಅಭ್ಯರ್ಥಿಗಳು ಜೆ.ಡಿ.ಎಸ್‌ನ ವೇದಾವತಿ ಶಿವಣ್ಣ ಬೇರೆ ಕ್ಷೇತ್ರದಿಂದ ಬಂದು ಸ್ವರ್ಧಿಸುತ್ತಿದ್ದಾರೆ ಈ ಕ್ಷೇತ್ರದಲ್ಲಿ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಪಕ್ಷದ ಘಟಾನುಘಟಿ ಮುಖಂಡರಿಗೆ ಪ್ರತಿಷ್ಠೆಯಾಗಿದೆ ಅದರೂ ಬಿ.ಜೆ.ಪಿ ಪ್ರಚಾರದಲ್ಲಿ ಹಿಂದೆ ಬಂದಿಲ್ಲ .

ಚನ್ನರಾಯಪಟ್ಟಣ ಜಿ.ಪಂ . ಸಾಮಾನ್ಯ ಕ್ಷೇತ್ರ. ಅತಿಹೆಚ್ಚು ಕುತೂಹಲ ಕೆರಳಿಸುತ್ತಿರುವ ಈ ಕ್ಷೇತ್ರದಲ್ಲಿ ಜಿ.ಪಂ ಮಾಜಿ ಸದಸ್ಯ ಬಿ.ರಾಜಣ್ಣ ಬಿ.ಜೆ.ಪಿ ಯಿಂದ ಕಣಕ್ಕಿಳಿದಿದ್ದಾರೆ ಒಂದು ಬಾರಿ ತಮ್ಮ ಪತ್ನಿಯನ್ನು ಗೆಲ್ಲಿಸಿ ನಂತರ ತಾನು ಎರಡು ಬಾರಿ ಆಯ್ಕೆಯಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೂ ಆದರೆ ಬದಲಾದ ರಾಜಕೀಯ ಧ್ರುವೀಕರಣದಲ್ಲಿ ಕಳೆದ ಎರಡು ವರ್ಷದ ಹಿಂದೆ ಕಾಂಗ್ರೆಸ್ ತೊರೆದು ಮೂರನೆ ಬಾರಿಗೆ  ಬಿ.ಜೆ.ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಪ್ರತಿಸ್ವರ್ಧಿಯಾಗಿ ಕಾಂಗ್ರೆಸ್ ನಿಂದ ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿ ನಾರಾಯಣ ಅಖಾಡಕ್ಕೆ ಇಳಿದಿದ್ದಾರೆ. ಅದರೆ ಈ ಹಿಂದೆ ಬಿ.ರಾಜಣ್ಣ ವಿರುದ್ಧ ಸೋತಿದ್ದ ಜೆ.ಡಿ.ಎಸ್ ನ ವೆಂಕಟೇಗೌಡ ಮತ್ತೆ ಕಣದಲ್ಲಿದ್ದಾರೆ ಪ್ರಚಾರ ಕ್ಷೇತ್ರದ ಎಲ್ಲೆಡೆ ಮಿಂಚಿನಂತೆ ನಡೆಯುತ್ತಿದೆ .ಈ ಹಿಂದೆ ಚುನಾವಣೆಯಲ್ಲಿ ಬಿಜ್ವವಾರ, ಅವತಿ, ಜೆ.ಡಿ.ಎಸ್ ಪಕ್ಷಕ್ಕೆ ಒಲಿದಿತ್ತು  ಮತ್ತು ಕುಂದಾಣ ಹಾಗೂ  ಚನ್ನರಾಯಪಟ್ಟಣ ಕ್ಷೇತ್ರ ಕಾಂಗ್ರೆಸ್ ವಶಕ್ಕೆ ಪಡೆದಿತ್ತು ಎಂಬುದನ್ನು ಗಮನಿಸಬಹುದು .

ಕೇಂದ್ರದಲ್ಲಿ ಬಿ.ಜೆ.ಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರ್ಕಾರ, ದೇವನಹಳ್ಳಿ  ವಿಧಾನ ಸಭೆಯಿಂದ ಜೆ.ಡಿ.ಎಸ್ ಶಾಸಕ ಪಿಳ್ಳಮುನಿಶಾಮಪ್ಪ, ಈ ವಿಭಿನ್ನಗಳ ಮಧ್ಯೆ ಗೊಂದಲದಲ್ಲಿರುವ ಮತದಾರರನ್ನು ಅಭ್ಯರ್ಥಿಗಳು ತಡರಾತ್ರಿಯ ವರೆಗೂ   ಮನೆ ಬಾಗಿಲಿಗೆ  ತೆರಳಿ ನಿದ್ದೆಗೆಡಿಸುತ್ತಿದ್ದಾರೆ,       ಅದರೆ ಗೆದ್ದ ನಂತರ ಇದೇ ರೀತಿ ಮನೆ ಬಾಗಿಲಿಗೆ ಸಮಸ್ಯೆ ಅಲಿಸಲು ಬರುವರೆ ಎಂಬುದನ್ನು ಮತದಾರರು ಪ್ರಶ್ನೆ ಮಾಡಬೇಕು ಅಷ್ಠೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.