ADVERTISEMENT

ಮನೆಗಳಿಗೆ ನುಗ್ಗಿದ ನೀರು

ದೇವನಹಳ್ಳಿ: ಭರಪೂರ ಮಳೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:35 IST
Last Updated 16 ಸೆಪ್ಟೆಂಬರ್ 2013, 9:35 IST

ದೇವನಹಳ್ಳಿ: ತಾಲ್ಲೂಕಿನ ವಿವಿಧೆಡೆ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಸುರಿದಿರುವ ಧಾರಾಕಾರ ಮಳೆ ಅಲ್ಲಲ್ಲಿ ಹಾನಿ ಉಂಟು ಮಾಡಿದೆ.

ಪಟ್ಟಣದ ದೊಡ್ಡಬಳ್ಳಾಪುರ ರಸ್ತೆ ಕ್ರಾಸ್ ಬಳಿಯಿದ್ದ ಬೃಹತ್‌ ಆಲದ ಮರ ರಸ್ತೆಗೆ ಉರುಳಿದೆ. ಇದರಿಂದಾಗಿ  ರಸೆ್ತ ಬದಿಯ ಮನೆ, ಅಂಗಡಿ, ಹೋಟೆಲ್‌ ಮತು್ತ ಒಂದು  ಆಟೊ ರಿಕ್ಷಾ ಸಂಪೂರ್ಣ ಜಖಂಗೊಂಡಿವೆ. ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

9ನೇ ವಾರ್ಡಿನ ಮರಳು ಬಾಗಿಲು ಬಡಾವಣೆಯಲ್ಲಿ ವಾಸದ ಮನೆಗಳಿಗೆ ನೀರು ನುಗಿ್ಗದೆ. ಇದರಿಂದ ಸುಮಾರು 8 ರಿಂದ 10 ಲಕ್ಷ ನಷ್ಟವಾಗಿದೆ ಎಂದು ಅಂದಾಜಿ ಸಲಾಗಿದೆ.

ಸ್ಥಳೀಯರ ಆಕ್ರೋಶ: ನೂರಾರು ವರ್ಷದ ಆಲದ ಮರ ಕಳೆದ ಮೂರು ವರ್ಷಗಳಿಂದ ಯಾವುದೇ ಕ್ಷಣದಲ್ಲಾ ದರೂ ನೆಲಕ್ಕೆ ಉರುಳುವ ಸ್ಥಿತಿಯಲ್ಲಿ ಇತ್ತು. ಈ ಕುರಿತು ಬೆಸ್ಕಾಂ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳಿಗೆ ಎರಡು ಬಾರಿ ಪ್ರತ್ಯೇಕ ಮನವಿ ಸಲ್ಲಿಸಲಾಗಿತ್ತು . ಅಲ್ಲದೆ 2013 ಮೇ.25ರಂದು ಶಾಸಕರಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ ಯಾರೂ ಈ ಬಗ್ಗೆ ಗಮನ ಹರಿಸಲಿಲ್ಲ.

ಕಡೆಗೂ ಮರ ಗುರುವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ಉರುಳಿ ಬಿದ್ದಿದೆ. ಹಗಲು ವೇಳೆ ಈ ಘಟನೆ ಸಂಭವಿಸಿದ್ದರೆ ಸಾಕಷ್ಟು ಹಾನಿ ಉಂಟಾಗುತ್ತಿತ್ತು ಎಂದು ಸ್ಥಳೀಯ ಹೋಟೆಲ್‌ ಮಾಲಿಕ ವಿ.ಮುನಿರಾಜು ಹೇಳಿದರು.

ಪಟ್ಟಣದ ವಿವಿಧೆಡೆ ಎತ್ತರ ಪ್ರದೇಶಗಳಿಂದ ಹರಿಯುವ ನೀರಿಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿಗಳನ್ನೇ ಪದೇ ಪದೆ ಅದೇ ದುರಸಿ್ತ ನೆಪದಲ್ಲಿ ಸಾರ್ವಜನಿಕರ ಹಣ ವ್ಯರ್ಥ ಮಾಡಲಾಗುತ್ತಿದೆ.

ಸೂಕ್ತ ಚರಂಡಿ ನಿರ್ವಹಣೆ ಇಲ್ಲದೆ ಮತ್ತು ರಾಜಕಾಲುವೆಗಳಲ್ಲಿ ಬೆಳೆದಿರುವ ಹುಲ್ಲು ಇತರೆ ಗಿಡಗಂಟಿಗಳಿಂದ ನೀರು ಸರಾಗವಾಗಿ ಹರಿಯದೆ ರಸೆ್ತ ಮತು್ತ ಮನೆಗಳಿಗೆ ನುಗಿ್ಗದೆ ಎಂದು ಸ್ಥಳಿಯ ನಿವಾಸಿ ನಂದಿ ವೆಂಕಟೇಶ್‌ ಆಕೊ್ರಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.